ಗ್ರಾಮದ ರುದ್ರೇಗೌಡ (65) ಮೃತಪಟ್ಟ ರೈತ. ಬುಧವಾರ ಸಂಜೆ ತಮ್ಮ ಜಮೀನಿಗೆ ನೀರು ಹಾಯಿಸಲು ಹೋಗಿದ್ದಾಗ ಬೋರ್ವೆಲ್ ಪ್ಯಾನಲ್ ಬೋರ್ಡ್‌ನಿಂದ ಇದಕ್ಕಿದ್ದಂತೆ ವಿದ್ಯುತ್ ತಗುಲಿ ರುದ್ರೇಗೌಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮೃತನ ಪುತ್ರ ಅರುಣ್ ಕುಮಾರ್ ನೀಡಿದ ದೂರಿನ ಅನ್ವಯ ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.