ರಾಜ್ಯ, ರಾಷ್ಟ್ರಮಟ್ಟದಲ್ಲಿ ಪರಾಭವ ಚಟುವಟಿಕೆ ಕಾಣಿಸುತ್ತಿದೆ. ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ, ಅಪಮೃತ್ಯು ಎಲ್ಲೆಡೆ ಅಧಿಕವಾಗಲಿದೆ. ವಿಶ್ವದ ಜಾಗತಿಕ ಮಟ್ಟದಲ್ಲಿ ಪ್ರಮುಖ ವ್ಯಕ್ತಿಗಳ ತಲೆದಂಡವಾಗುವುದು ಖಚಿತವಾಗಿದೆ. ಭಗವಂತನ ಆರಾಧನೆ, ಧಾರ್ಮಿಕ ಚಿಂತನೆಗಳಿಂದ ಶಾಂತಿ ನೆಮ್ಮದಿ ಲಭಿಸಲಿದ್ದು, ಜನಸಾಮಾನ್ಯರು ಆಸೆಗೆ ಕಡಿವಾಣ ಹಾಕಿ ನೆಮ್ಮದಿಯ ಬದುಕಿಗಾಗಿ ಸರಳ ಬದುಕು, ಜಪ, ತಪ ಮಾಡುವುದು ಲೇಸು ಎಂದು ನುಡಿದರು.