ಸಂವಿಧಾನದಿಂದ ಸರ್ವಧರ್ಮಕ್ಕೂ ಸಮಾನ ನ್ಯಾಯ

 ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಸಂವಿಧಾನೋತ್ಸವ ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಮಾತನಾಡಿದರು. ಶಿವಕುಮಾರ್, ಸುರೇಶ್, ಗೌತಮ್,   ಹೃದೀಶ್, ಸಂತೋಷ್ ಕುಮಾರ್, ನಾಗರತ್ನಾ, ನಂಜಮಣಿ , ಹೇಮಾವತಿ, ಚೇತನ್ , ಸಂದೇಶ್ ಇದ್ದರು.
ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಸಂವಿಧಾನೋತ್ಸವ ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಮಾತನಾಡಿದರು. ಶಿವಕುಮಾರ್, ಸುರೇಶ್, ಗೌತಮ್, ಹೃದೀಶ್, ಸಂತೋಷ್ ಕುಮಾರ್, ನಾಗರತ್ನಾ, ನಂಜಮಣಿ , ಹೇಮಾವತಿ, ಚೇತನ್ , ಸಂದೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದರ್ಶನ್ ಬಿ.ಸೋಮಶೇಖರ್ ಅಭಿಪ್ರಾಯ
  • ಸಂವಿಧಾನೋತ್ಸವ ಕಾರ್ಯಕ್ರಮ
ಮಳವಳ್ಳಿ: ಪ್ರಜಾಪ್ರಭುತ್ವದ ಮಹತ್ವವನ್ನು ಇಡೀ ವಿಶ್ವಕ್ಕೆ ಮಾದರಿಯಾಗಿ ರೂಪಿತಗೊಂಡಿರುವ ನಮ್ಮ ದೇಶದ ಭದ್ರ ತಳಪಾಯವಾಗಿರುವುದು ಶ್ರೇಷ್ಠ ಸಂವಿಧಾನ ರಚನೆಯಿಂದ ಎಂದು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರ ಸಮೀಪವಿರುವ ಅಂಬೇಡ್ಕರ್ ಪುತ್ಥಳಿ ಬಳಿ ಬಿ.ಆರ್.ಅಂಬೇಡ್ಕರ್ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಂವಿಧಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಲವು ಭಾಷೆ, ಧರ್ಮ, ವಿವಿಧ ಸಂಸ್ಕೃತಿ ಆಚರಣೆವೊಂದಿರುವ ಸರ್ವ ಸಮುದಾಯಗಳನ್ನು ಒಳಗೊಂಡಿರುವ ದೇಶ ಭಾರತವಾಗಿದೆ ಎಂದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರ ಜತೆಗೆ ವಿಶ್ವ ಮಟ್ಟದಲ್ಲಿ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಇದಕ್ಕೆ ಪ್ರಮುಖ ಕಾರಣವೇ ಅಂಬೇಡ್ಕರ್ ಮುಂದಾಳತ್ವದಲ್ಲಿ ಹಲವು ಬುದ್ಧಿ ಜೀವಿಗಳು ನಮ್ಮ ದೇಶಕ್ಕೆ ನೀಡಿದ ಸಂವಿಧಾನ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗದಿಂದ ಬಂದ ಬಾಬ ಸಾಹೇಬರು ಇಡೀ ವಿಶ್ವ ಮೆಚ್ಚುವಂತಹ ಸಂವಿಧಾನ ಕರಡು ರಚನಾ ಮಂಡಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಸರ್ವಧರ್ಮಕ್ಕೂ ಸಮಾನ ನ್ಯಾಯ ತಂದು ಕೊಟ್ಟಿದ್ದು, ಅವರ ಮಾದರಿ ಬದುಕನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಅಕ್ಕ ಐಎಎಸ್ ಅಕಾಡೆಮಿ ಅಧ್ಯಕ್ಷ ಶಿವಕುಮಾರ್, ಮುಖಂಡ ಸುರೇಶ್ ಗೌತಮ್, ಅಂಬೇಡ್ಕರ್ ಆಚರಣಾ ಸಮಿತಿ ಅಧ್ಯಕ್ಷ ಹೃದೀಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಂತೋಷ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಮಣಿ, ಉಪ ತಹಸೀಲ್ದಾರ್ ಹೇಮಾವತಿ, ರಾಜಸ್ವ ನಿರೀಕ್ಷಕ ಚೇತನ್, ಯುವ ಮುಖಂಡ ಸಂದೇಶ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net