ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ

ಮದ್ದೂರು ಸಮೀಪದ ಚಾಮಹಳ್ಳಿಯ ಸನ್ ರೈಸ್ ಸ್ಕೂಲ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶ್ರೀಕಾಂತ್ ಚಾಲನೆ ನೀಡಿದರು. ಪಿ.ರಾಜು, ಮಹೇಂದ್ರ, ಸುಮಾ, ಅಭಿಷೇಕ, ಚಲುವರಾಜು, ಸಂತೋಷಕುಮಾರ,  ಡಿ.ಎಸ್.ಸಾಗರ್, ಸುಹಾಸ್, ಮನೋಜ್, ಸೌಮ್ಯ, ಪ್ರೀತಿ, ಸಿಂಚನ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ್ ಅಭಿಮತ
ಮದ್ದೂರು: ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ್ ತಿಳಿಸಿದರು.
ಸಮೀಪದ ಚಾಮಹಳ್ಳಿಯ ಸನ್ ರೈಸ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಬಗೆಯ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಮಹತ್ವದ ಬಗ್ಗೆ ಮಕ್ಕಳಿಗೆ ಚಿಕ್ಕನಿಂದಲೇ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಜತೆಗೆ ಜಲ ಮೂಲಗಳಾದ ಕೆರೆ, ಕಟ್ಟೆ, ನದಿಗಳನ್ನು ರಕ್ಷಣೆ ಮಾಡಿ ಉತ್ತಮ ಪರಿಸರ ನಿರ್ಮಾಣವಾಗಲು ಸಹಕಾರ ನೀಡಬೇಕು ಎಂದರು.
ಅತಿಯಾದ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಬಿಟ್ಟು ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಬಳಕೆ ಮಾಡಬೇಕು. ಈ ಬಗ್ಗೆ ಅರಿವು ಮೂಡಿಸಬೇಕು. ಪರಿಸರದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸನ್ ರೈಸ್ ಸ್ಕೂಲ್ ಅಧ್ಯಕ್ಷ ಪಿ.ರಾಜು, ಕಾರ್ಯದರ್ಶಿ ಮಹೇಂದ್ರ, ಮುಖ್ಯ ಶಿಕ್ಷಕಿ ಸುಮಾ, ಬ್ಯಾಂಕ್ ಸಿಬ್ಬಂದಿ ಅಭಿಷೇಕ, ಚಲುವರಾಜು, ಸಂತೋಷಕುಮಾರ, ಡಿ.ಎಸ್.ಸಾಗರ್, ಸುಹಾಸ್, ಮನೋಜ್, ಸೌಮ್ಯಾ, ಪ್ರೀತಿ, ಸಿಂಚನಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net