ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ಹಲಗೂರಿನಲ್ಲಿ ಜೆ.ಜೆ.ಪಬ್ಲಿಕ್ ಸ್ಕೂಲ್ ಅವರಣದಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮ ಪ್ರಯುಕ್ತ ಗಣ್ಯರು ಗಿಡ ನೆಟ್ಟು ನೀರೆರೆದರು.
ಹಲಗೂರಿನಲ್ಲಿ ಜೆ.ಜೆ.ಪಬ್ಲಿಕ್ ಸ್ಕೂಲ್ ಅವರಣದಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮ ಪ್ರಯುಕ್ತ ಗಣ್ಯರು ಗಿಡ ನೆಟ್ಟು ನೀರೆರೆದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆ.ಜೆ.ಸೋಮಶೇಖರ್ ಅಭಿಮತ
ಹಲಗೂರು: ನಮಗೆ ಉತ್ತಮ ಆರೋಗ್ಯ ಸಿಗಬೇಕಾದರೆ ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ವಳ್ಳಳ್ಳಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಜೆ.ಸೋಮಶೇಖರ್ ತಿಳಿಸಿದರು.
ಹಲಗೂರಿನ ಜೆ.ಜೆ.ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಸಿರು ಇಲ್ಲದಿದ್ದರೇ ಉಸಿರು ಇರುವುದಿಲ್ಲ, ನಮ್ಮ ಆದ್ಯ ಕರ್ತವ್ಯಗಳಲ್ಲಿ ಸಸ್ಯಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಪೋಷಣೆ ಮಾಡಬೇಕು, ಇಂದು ನಾವು ವೃಕ್ಷಗಳನ್ನು ರಕ್ಷಿಸಿದರೆ ಮುಂದೊಂದು ದಿನ ವೃಕ್ಷಗಳು ನಮ್ಮನ್ನು ರಕ್ಷಿಸುತ್ತವೆ ಎಂದರು.
ಪ್ರಾಂಶುಪಾಲರಾದ ಲಲಿತಾಂಬಾ ಸೋಮಶೇಖರ್ ಮಾತನಾಡಿ, ಇತ್ತೀಚೆಗೆ ಬಿಸಿಲಿನ ತೀವ್ರತೆಯ ಪರಿಣಾಮದಿಂದಾಗಿ ಸಾರ್ವಜನಿಕರು ಹಲವಾರು ಸಂಕಷ್ಟಗಳನ್ನು ಎದುರಿಸುವಂತಾಗಿದೆ.
ಇದೆಲ್ಲವನ್ನೂ ತಪ್ಪಿಸಬೇಕೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಮನೆ ಆವರಣದಲ್ಲಿ ಕನಿಷ್ಟ ಒಂದೊಂದು ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶಿವಮಣಿ, ಶಿಕ್ಷಣ ಸಂಯೋಜಕ ವಿಕಾಶ್, ಶಿಕ್ಷಕಿ ಸೀಮಾ, ರಾಜಶೇಕರ್ ಮೂರ್ತಿ, ಸುಮಂತ್, ಸುಮಿತ್ರಾ, ಹೇಮಾ, ಪ್ರತಿಮಾ, ಜಮೃದ್ದ್, ಉಷಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net