ಒತ್ತುವರಿ ರಸ್ತೆ ತೆರವು ಕಾರ್ಯಾಚರಣೆ

ಹಲಗೂರು ಸಮೀಪದ ವಿ.ಬಸಾಪುರ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿದ್ದ ರಸ್ತೆಯನ್ನು ಶುಕ್ರವಾರ ಉಪ ತಹಸೀಲ್ದಾರ್ ನಟರಾಜು ಮತ್ತು ಸಿಬ್ಬಂದಿ ತೆರವುಗೊಳಿಸಿದರು.
ಹಲಗೂರು ಸಮೀಪದ ವಿ.ಬಸಾಪುರ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿದ್ದ ರಸ್ತೆಯನ್ನು ಶುಕ್ರವಾರ ಉಪ ತಹಸೀಲ್ದಾರ್ ನಟರಾಜು ಮತ್ತು ಸಿಬ್ಬಂದಿ ತೆರವುಗೊಳಿಸಿದರು.
Published on
ಹಲಗೂರು: ಸಮೀಪದ ವಿ.ಬಸಾಪುರ ಗ್ರಾಮದ ಸರ್ವೇ ನಂಬರ್ 74ರಲ್ಲಿ ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗ ಮತ್ತು ರಸ್ತೆಯನ್ನು ಕಂದಾಯ ಇಲಾಖೆ ಅಕಾರಿಗಳು ಶುಕ್ರವಾರ ಮಧ್ಯಾಹ್ನ ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.
ಒದುಬಸಪ್ಪನ ದೊಡ್ಡಿ ಗ್ರಾಮದಲ್ಲಿನ ಸಾರ್ವಜನಿಕ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ನೆರೆಹೊರೆಯ ಜಮೀನುಗಳಿಗೆ ಹೋಗಲು ತೊಂದರೆ ಆಗುತ್ತಿದೆ. ಜಮೀನು ಮಾಲೀಕರು, ರೈತರು ಕೃಷಿ ಚಟುವಟಿಕೆಗೆ ಹೋಗಿ ಬರಲು ತೀವ್ರ ತೊಂದರೆ ಪಡಬೇಕಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆ ನಿಲ್ಲಿಸುವಂತಾಗಿದೆ. ರೈತರು, ಸಾರ್ವಜನಿಕರು ಮತ್ತು ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲ ಆಗುವಂತೆ ರಸ್ತೆ ತೆರವು ಮಾಡಿಕೊಡಬೇಕೆಂದು ಗ್ರಾಮದ ರೈತ ಮಧು ಮಳವಳ್ಳಿ ತಹಸೀಲ್ದಾರ್ ಕಚೇರಿಗೆ ದೂರು ಸಲ್ಲಿಸಿದ್ದರು.
ಈ ಸಂಬಂಧ ಉನ್ನತ ಅಕಾರಿಗಳ ಅದೇಶದ ಮೇರೆಗೆ ಹಲಗೂರು ವೃತ್ತದ ಉಪ ತಹಸೀಲ್ದಾರ್ ನಟರಾಜು ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಾಲೂಕು ಸರ್ವೇಯರ್ ಎಂ.ಎಸ್.ಬೀರೇಶ್ ಸ್ಥಳಕ್ಕೆ ಆಗಮಿಸಿ ಸಂಬಂಸಿದ ರಸ್ತೆ ಜಾಗವನ್ನು ಗುರುತಿಸಿದರು. ಹಲಗೂರು ಪೊಲೀಸ್ ಠಾಣೆಯ ಎಎಸ್‌ಐ ಎಂ.ಸಿ.ರಮೇಶ್ ಮತ್ತು ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಕಾಲು ದಾರಿಯನ್ನು ಜೆಸಿಬಿ ಯಂತ್ರದಿಂದ ತೆರವು ಗೊಳಿಸಲು ಮುಂದಾದರು.
ಸರ್ವೇ ನಂಬರ್ 74, 77, 80 ರಲ್ಲಿ ರೈತರು ಈಗಾಗಲೇ ಬೆಳೆದಿರುವ ಬೆಳೆಗಳನ್ನು ತೆರವು ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಉಪ ತಹಸೀಲ್ದಾರ್ ನಟರಾಜು ಅವರಲ್ಲಿ ಮನವಿ ಮಾಡಿಕೊಂಡರು. ಮನವಿಗೆ ಸಹಕರಿಸಿದ ಉಪ ತಹಸೀಲ್ದಾರ್ ಅಳತೆಗೊಳಪಟ್ಟ ರಸ್ತೆ ಜಾಗದಲ್ಲಿರುವ ಸಲನ್ನು ಮುಂದಿನ 20 ದಿನಗಳೊಳಗೆ ತೆರವು ಮಾಡಿಕೊಳ್ಳಲು ರೈತರಿಗೆ ಗಡುವು ನೀಡಿದರು.
ರಾಜಸ್ವ ನೀರೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಸೋಮಣ್ಣ, ಸಿಬ್ಬಂದಿ ಸುಭಾಷ್ ಭರಣಿ, ಅರ್ಜಿದಾರ ಮಧು ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net