ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಶ್ಲಾಘನೀಯ

ಮಳವಳ್ಳಿ ತಾಲೂಕಿನ ಮಿಕ್ಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳಿಗೆ ಮಂಗಳವಾರ ಬೀಟ್ ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಪ್ರಭುಸ್ವಾಮಿ, ಕಿರಣ್ ಕುಮಾರ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಕಿರುಗಾವಲು ಪೊಲೀಸ್ ಠಾಣೆ ಪಿಎಸ್‌ಐ ಗಳಾದ ರವಿಕುಮಾರ್, ಯೋಗೇಶ್, ಎಎಸ್‌ಐ ಶ್ರೀಕಂಠ ಇತರರಿದ್ದರು.
ಮಳವಳ್ಳಿ ತಾಲೂಕಿನ ಮಿಕ್ಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳಿಗೆ ಮಂಗಳವಾರ ಬೀಟ್ ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಪ್ರಭುಸ್ವಾಮಿ, ಕಿರಣ್ ಕುಮಾರ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಕಿರುಗಾವಲು ಪೊಲೀಸ್ ಠಾಣೆ ಪಿಎಸ್‌ಐ ಗಳಾದ ರವಿಕುಮಾರ್, ಯೋಗೇಶ್, ಎಎಸ್‌ಐ ಶ್ರೀಕಂಠ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಿರುಗಾವಲು ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್ ಅಭಿಪ್ರಾಯ
ಮಳವಳ್ಳಿ: ಕಾನೂನು ಸುವ್ಯವಸ್ಥೆ ಕಾಪಾಡುವ ಒತ್ತಡದ ಕಾರ್ಯದ ನಡುವೆಯೂ ಬೀಟ್ ಪೊಲೀಸರು ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕಿರುಗಾವಲು ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್ ಹೇಳಿದರು.
ತಾಲೂಕಿನ ಮಿಕ್ಕೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಂಗಳವಾರ ಮಿಕ್ಕೆರೆ ಬೀಟ್ ಪೊಲೀಸ್ ನಾನ್ಸ್‌ಟೇಬಲ್‌ಗಳಾದ ಆರ್.ಪ್ರಭುಸ್ವಾಮಿ ಮತ್ತು ಕಿರಣ್ ಕುಮಾರ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಪೊಲೀಸರು ಜನಸ್ನೇಹಿಯಾಗಿದ್ದರೆ ಸಾರ್ವಜನಿಕರಿಗೆ ಕಾನೂನು ಪಾಲನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಾಧ್ಯ ಎಂದರು. ಸಮಾಜದಲ್ಲಿ ಅಪರಾಧ, ಅಪಘಾತ, ಅವಘಡ ಸೇರಿದಂತೆ ಯಾವುದೇ ಪ್ರಕರಣಗಳು ಜರುಗಿದರು ಪೊಲೀಸರ ಕರ್ತವ್ಯ ಪಾಲನೆ ಪ್ರಾಮುಖ್ಯತೆ ಇರುತ್ತದೆ. ಆಗಾಗಿ ಪ್ರತಿದಿನವೂ ಪೊಲೀಸರು ಒಂದಿಲ್ಲೊಂದು ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿರುತ್ತೇವೆ. ಇಂತಹ ಒತ್ತಡ ಕಾರ್ಯದ ನಡುವೆಯೂ ಶೈಕ್ಷಣಿಕವಾಗಿ ಸಾಧನೆ ಮಾಡಿರುವ ಮಕ್ಕಳನ್ನು ಪ್ರೋತ್ರಾಹಿಸುವ ಕಾರ್ಯಕ್ರಮ ಆಯೋಜಿಸಿರುವ ನಮ್ಮ ಠಾಣಾ ವ್ಯಾಪ್ತಿಯ ಬೀಟ್ ಪೊಲೀಸ್ ಪೇದೆಗಳ ಕಾರ್ಯ ಪ್ರಶಂಸನಿಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನರೊಡನೆ ಆತ್ಮಿಯತೆ ಬಾಂಧವ್ಯಗಳನ್ನು ಬೆಳೆಸಿಕೊಳ್ಳುವುದರಿಂದ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದರು.
ಕಿರುಗಾವಲು ಪೊಲೀಸ್ ಠಾಣೆ ಪ್ರೋಪೆಷನರಿ ಪಿಎಸ್‌ಐ ಯೋಗೇಶ್, ಎಎಸ್‌ಐ ಶ್ರೀಕಂಠ, ಯುನಿವರ್ಸಲ್ ಟ್ರಸ್ಟ್ ಕಾರ್ಯದರ್ಶಿ ತಳಗವಾದಿ ಪ್ರಕಾಶ್, ಶಾಲೆ ಎಸ್ ಡಿಎಂಸಿ ಸಮಿತಿ ಅಧ್ಯಕ್ಷ ಮಹದೇವ, ಮುಖ್ಯ ಶಿಕ್ಷಕ ಸುಧಾಕರ್ ಮ್ಯಾಥ್ಯೂ, ಸಹ ಶಿಕ್ಷಕರಾದ ಮಂಜುಳಾ, ಶಿವಕುಮಾರಸ್ವಾಮಿ, ರಶ್ಮಿ, ಪವಿತ್ರಾ, ಬಸರಾಜು, ರೂಪಾಶ್ರೀ ಕೆ.ಆರ್, ನಾಗರಾಜು, ರವಿ, ಗ್ರಾಮದ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net