ಸಮಾಜದಲ್ಲಿ ಅಸ್ಪಶ್ಯತೆ ನಿರ್ಮೂಲನೆ ಅಗತ್ಯ

ಮದ್ದೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ವಿಚಾರಗೋಷ್ಠಿ  ಹಾಗೂ ಕಾರ್ಯಾಗಾರವನ್ನು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಉದ್ಘಾಟಿಸಿದರು. ನಾಗರಾಜು, ರಾಮಲಿಂಗಯ್ಯ, ಧನಂಜಯ, ನವೀನ್‌ಕುಮಾರ್, ನಾರಾಯಣ್ ಇದ್ದರು.
ಮದ್ದೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ವಿಚಾರಗೋಷ್ಠಿ ಹಾಗೂ ಕಾರ್ಯಾಗಾರವನ್ನು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಉದ್ಘಾಟಿಸಿದರು. ನಾಗರಾಜು, ರಾಮಲಿಂಗಯ್ಯ, ಧನಂಜಯ, ನವೀನ್‌ಕುಮಾರ್, ನಾರಾಯಣ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಹೇಳಿಕೆ
  • ವಿಚಾರಗೋಷ್ಠಿ
ಮದ್ದೂರು: ಸಮಾಜದಲ್ಲಿ ಸಮಾನತೆ ನಿರ್ಮಾಣವಾದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗಲಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಕಾಯ್ದೆಯ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ದೇಶದ ಸಂವಿಧಾನದಲ್ಲಿ ಏಕತೆ, ಸಮಗ್ರತೆ ಇರಬೇಕು ಎಂದಿದೆ. ಇದನ್ನು ಎಲ್ಲರೂ ಪಾಲಿಸಬೇಕು ಹಾಗೂ ಸಮಾಜದಲ್ಲಿ ಅಸ್ಪಶ್ಯತೆ ಎಂಬ ಪಿಡುಗನ್ನು ನಿರ್ಮೂಲನೆ ಮಾಡಬೇಕು. ಕೆಲವೊಂದು ಕಡೆಗಳಲ್ಲಿ ಅಸ್ಪಶ್ಯತೆ ಈಗಲೂ ಇರುವ ಬಗ್ಗೆ ದೂರುಗಳು ಬರುತ್ತವೆ. ಇದನ್ನು ಕೇಳಿ ಬೇಸರವಾಗುತ್ತದೆ. ಇಂತಹ ಮುಂದುವರೆದ ದಿನಗಳಲ್ಲಿಯೂ, ಜನತೆ ಹೆಚ್ಚು ಪ್ರಜ್ಞಾವಂತರಾಗಿದ್ದರೂ ಕೆಲವೊಂದು ಘಟನೆಗಳು ಆಗುವುದು ಬೇಸರದ ಸಂಗತಿ ಎಂದರು.
ಭಾರತದಲ್ಲಿ ಮಾತ್ರ ಈ ರೀತಿಯ ಅಸ್ಪಶ್ಯತೆ ಆಚರಣೆಯಲ್ಲಿದ್ದು, ಕೇವಲ ಹುಟ್ಟಿನಿಂದ ಮನುಷ್ಯತ್ವವನ್ನು ಮರೆತು ಅವನು ಮೇಲು, ಇವನು ಕೀಳು ಎಂಬ ತಾರತಮ್ಯ ತೋರುವುದು ಸಮಾಜಕ್ಕೆ ಅಂಟಿದ ಶಾಪ ಎಂದರು.
ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರುವುದು, ಮುಟ್ಟಿಸಿಕೊಳ್ಳದಿರುವುದು, ಇತರೆ ವಿಷಯಗಳಿಗೆ ನಿರ್ಬಂಧ ವಿಧಿಸುವುದು ಸೇರಿದಂತೆ ಈ ರೀತಿಯ ಘಟನೆಗಳು ಸಂಭವಿಸಿದಲ್ಲಿ ಕೂಡಲೇ ಹತ್ತಿರದ ಪೊಲೀಸರ ಗಮನಕ್ಕೆ ತರಬೇಕು. ಆಗ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಕಿ ಮತ್ತು ಬಲವರ್ಧನ ಸಮಿತಿಯ ಸಂಚಾಲಕಿ ಪಿ.ಯಶೋದಾ, ಸಮಾಜ ಕಲ್ಯಾಣ ಇಲಾಖಾಧಿಕಾರಿ ನಾಗರಾಜು, ತಾ.ಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ, ಆರಕ್ಷಕ ವೃತ್ತ ನಿರೀಕ್ಷಕರಾದ ನವೀನ್ ಕುಮಾರ್, ನಾರಾಯಣ್, ಅನಿಲ್ ಕುಮಾರ್, ಜಾಗೃತಿ ಸಮಿತಿಯ ಸದಸ್ಯ ಚಿದಂಬರ ಮೂರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net