ಗ್ರಾಮೀಣ ಶಾಲೆಗಳಿಂದ ಬಡ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯ

ಕಿಕ್ಕೇರಿ ಹೋಬಳಿಯ ಆನೆಗೊಳದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯಶಿಕ್ಷಕ ಪುರುಷೋತ್ತಮ ಅವರನ್ನು ಇತ್ತೀಚೆಗೆ ಗೌರವಿಸಲಾಯಿತು. ಜೆ.ಎನ್.ರಾಮಕೃಷ್ಣೇಗೌಡ, ಪ್ರಕಾಶ್ ಮೆನಾಗರ, ದೇವರಾಜು ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ಆನೆಗೊಳದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯಶಿಕ್ಷಕ ಪುರುಷೋತ್ತಮ ಅವರನ್ನು ಇತ್ತೀಚೆಗೆ ಗೌರವಿಸಲಾಯಿತು. ಜೆ.ಎನ್.ರಾಮಕೃಷ್ಣೇಗೌಡ, ಪ್ರಕಾಶ್ ಮೆನಾಗರ, ದೇವರಾಜು ಮತ್ತಿತರರಿದ್ದರು.
Published on
ಕಿಕ್ಕೇರಿ: ಶಿಕ್ಷಕ ವೃತ್ತಿಯಲ್ಲಿ ಮಾಡಿದ ಸೇವೆ ಜೀವಿತಾವಧಿಯ ಕೊನೆಯವರೆಗೆ ಉಳಿಯಲಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಪುರುಷೋತ್ತಮ ತಿಳಿಸಿದರು.
ಹೋಬಳಿಯ ಆನೆಗೊಳ ಗ್ರಾಮದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಂಸ್ಥೆ ತನ್ನ ವೃತ್ತಿ ಜೀವನದಲ್ಲಿ ಸಂಪೂರ್ಣ ಸಹಕಾರ ನೀಡಿದೆ. ಇಲ್ಲಿನ ಶಿಕ್ಷಕರ, ವಿದ್ಯಾರ್ಥಿಗಳ ಪ್ರೀತಿ ಮರೆಯಲಾರೆ. ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಕಠಿಣವಾಗಿ ತಿಳಿಸಿದಾಗಲೂ ಪ್ರೀತಿಯಿಂದ ಸ್ವೀಕರಿಸುತ್ತಿದ್ದ ಕ್ಷಣ ಮರೆಯಲಾರೆ ಎಂದು ಸ್ಮರಿಸಿದರು.
ಗ್ರಾಮೀಣ ಪ್ರದೇಶದಲ್ಲಿನ ಶಾಲೆ ಉಳಿದರೆ ಮಾತ್ರ ಬಡ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗಲಿದೆ. ನಿವೃತ್ತಿಯಾದರೂ ಈ ಶಾಲೆಯ ಮಕ್ಕಳಿಗಾಗಿ ಶಿಕ್ಷಕನಾಗಿ ಸದಾ ದುಡಿಯಲು ಬದ್ಧನಿರುವೆ. ಮಠದ ಪ್ರೀತಿಗೆ ಋಣಿಯಾಗಿದ್ದು, ವಿದ್ಯಾರ್ಥಿಗಳು ಪಾಠ ಪ್ರವಚನದಲ್ಲಿ ಸಮಸ್ಯೆಯಾದರೆ ಯಾವುದೇ ವೇಳೆ ತನ್ನನ್ನು ಕೇಳಬಹುದು ಎಂದು ಹೇಳಿದರು.
ಸಂಸ್ಥೆಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾಗಿದೆ. ವೃತ್ತಿಗೆ ವಂಚನೆ ಮಾಡದೆ ಶ್ರೀಮಠದ ಸದ್ಭಕ್ತರಾಗಿ ಮಕ್ಕಳಿಗೆ ಪ್ರೀತಿಯ ಗುರುವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪುರುಷೋತ್ತಮ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ನುಡಿದರು.
ಶಿಕ್ಷಕರಾದ ಪ್ರಕಾಶ್ ಮೆನಾಗರ, ದೇವರಾಜು ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net