ಎಲ್ಲ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯವಾಗಿ ನಿರಂತರ ಆ್ಯಪ್ ಮೂಲಕ ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ. ಶೇ.86 ವಿದ್ಯಾರ್ಥಿಗಳು ಮಾತ್ರ ನೋಂದಣಿಯಾಗಿದ್ದಾರೆ. ಆದ್ದರಿಂದ, ಕೂಡಲೇ ಎಲ್ಲ ಮಕ್ಕಳನ್ನು ನೋಂದಣಿ ಮಾಡಿಸಬೇಕು. ಜಿಲ್ಲೆಯಲ್ಲಿ ಒಟ್ಟು 5,092 ಶಿಕ್ಷಕರಿದ್ದಾರೆ. ಎಲ್ಲ ಶಿಕ್ಷಕರು ಕಡ್ಡಾಯವಾಗಿ ಕರ್ತವ್ಯ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಪ್ರತಿ ದಿನ ತಪ್ಪದೆ ಹಾಜರಾತಿ ಹಾಕಬೇಕು. ಕೆಲವು ಶಿಕ್ಷಕರು ಕರ್ತವ್ಯಕ್ಕೆ ಬಂದಾಗ ಹಾಜರಾತಿ ಹಾಕಿದ್ದು, ಕರ್ತವ್ಯದ ಅವಧಿ ಮುಗಿದ ನಂತರ ಚೆಕ್‌ಔಟ್ ಮಾಡದಿರುವುದು ಕಂಡುಬಂದಿರುತ್ತದೆ. ಆದ್ದರಿಂದ, ಎಲ್ಲ ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಚೆಕ್‌ಇನ್ ಮತ್ತು ಚೆಕ್‌ಔಟ್ ಮಾಡಬೇಕು. ಜಿಲ್ಲೆಯಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿನ ಕಟ್ಟಡಗಳ ಸ್ಥಿತಿಗತಿ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಡಿಡಿಪಿಯುಗೆ ಸೂಚಿಸಿದರು.