ಸಮ ಸಮಾಜದ ಶ್ರೀಗಂಧ ಅಂಬೇಡ್ಕರ್

ಕಿಕ್ಕೇರಿ ಕೆಪಿಎಸ್ ಶಾಲೆಯಲ್ಲಿ ಮಂಗಳವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಚಲುವನಾರಾಯಣಸ್ವಾಮಿ, ಎಸ್.ಎಂ. ಬಸವರಾಜು, ಬಿ.ಎನ್. ಪರಿಶಿವಮೂರ್ತಿ, ದೀಪಕ್, ಗಿರೀಶ್, ಪಲ್ಲವಿ ಮತ್ತಿತರರಿದ್ದರು.
ಕಿಕ್ಕೇರಿ ಕೆಪಿಎಸ್ ಶಾಲೆಯಲ್ಲಿ ಮಂಗಳವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಚಲುವನಾರಾಯಣಸ್ವಾಮಿ, ಎಸ್.ಎಂ. ಬಸವರಾಜು, ಬಿ.ಎನ್. ಪರಿಶಿವಮೂರ್ತಿ, ದೀಪಕ್, ಗಿರೀಶ್, ಪಲ್ಲವಿ ಮತ್ತಿತರರಿದ್ದರು.
Published on
ಕಿಕ್ಕೇರಿ: ಸರ್ವರಿಗೂ ಸಮಪಾಲು, ಸಮಬಾಳು ಲಭಿಸಬೇಕು ಎಂದು ಬದುಕನ್ನೇ ಗಂಧದ ಕೊರಡಿನಂತೆ ತೇಯ್ದವರು ಡಾ.ಅಂಬೇಡ್ಕರ್ ಎಂದು ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ತಿಳಿಸಿದರು.
ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಣ ಸಮಾಜದ ಪರಿವರ್ತನೆಗಾಗಿ ಇರುವ ಬ್ರಹ್ಮಾಸ್ತ್ರ. ಪ್ರತಿಯೊಬ್ಬರಿಗೂ ಶಿಕ್ಷಣ ಸಮಾನವಾಗಿ ಲಭಿಸಿದ್ದಲ್ಲಿ ಮಾತ್ರ ಸುಸ್ಥಿರ ಸಮಾಜ, ಸಮಪಾಲು, ವಿಶ್ವಭ್ರಾತೃತ್ವ, ಸಮಾನತೆ, ಸಬಲೀಕರಣ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸ್ವಾತಂತ್ರ್ಯ ಸಿಗಲಿದೆ ಎಂದು ನಂಬಿದವರು ಅಂಬೇಡ್ಕರ್ ಎಂದರು.
ಸಮಾಜದ, ಬಡತನದ ನೋವನ್ನು ಅರಿತವರು. ತಮ್ಮಂತೆ ಭವಿಷ್ಯದ ಪ್ರಜೆಗಳು ನಿಕೃಷ್ಟ ಬದುಕು ಸಾಗಿಸಬಾರದು ಎಂದು ಉನ್ನತ ವ್ಯಾಸಂಗ ಮಾಡಿದರು. ಅವಿರತವಾಗಿ ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಓದಿ ಸುಭದ್ರವಾದ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿದರು. ಇವರ ದೂರದೃಷ್ಟಿಯ ಫಲವಾಗಿ ಮಹಿಳೆಯರಿಗೆ ಶಿಕ್ಷಣ, ಬಾಲ್ಯವಿವಾಹ ನಿಷೇಧ, ಸಬಲೀಕರಣ, ಲಿಂಗಭೇದ ತಾರತಮ್ಮ ದೂರವಾಗಿದೆ. ಹುಟ್ಟಿನಿಂದ ಸಾಯುವವರಿಗೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿದೆ. ಆಸ್ತಿ ಹಕ್ಕು, ಉದ್ಯೋಗ, ಶಿಕ್ಷಣ ವಂಚನೆ, ಮಹಿಳಾ ದೌರ್ಜನ್ಯ, ಬಾಲ್ಯವಿವಾಹ, ಬಾಲಕಾರ್ಮಿಕ, ವರದಕ್ಷಿಣೆ ಕಿರುಕುಳದಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಿ ಸಂವಿಧಾನದ ತಳಹದಿಯಲ್ಲಿ ಕಾನೂನು ನೀಡಿದರು. ಮತದಾನದ ಹಕ್ಕು ನೀಡಿ ಉತ್ತಮ ನಾಯಕನ ಆಯ್ಕೆ, ಸುಭದ್ರ ಸರ್ಕಾರ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿ ತಂದರು. ಧಮನಿತರಿಗಾಗಿ ಮೀಸಲಾತಿ ಮೂಲಕ ಶಿಕ್ಷಣ, ಉದ್ಯೋಗ ಸಿಗಲು ದಾರದೀಪವಾದರು ಎಂದರು.
ಮತದಾನ ಎನ್ನುವುದು ದೇಶದ ಸುಭದ್ರತೆಯ ಅಸ್ತ್ರವಾಗಿದೆ. ಅನಕ್ಷರತೆ ಎಂಬ ಪೆಡಂಭೂತ ಜಾತಿ ವ್ಯವಸ್ಥೆ, ಅಸ್ಪಶ್ಯತೆ, ಬಡತನ, ಕಂದಾಚಾರ, ಮೌಢ್ಯದ ಜತೆಗೆ ಬದುಕುವ ಹಕ್ಕು ಕಸಿದುಕೊಳ್ಳಲಿದೆ. ಇದನ್ನರಿತು ಉನ್ನತ ವ್ಯಾಸಂಗ ಮಾಡಿ ಸಂವಿಧಾನದ ಮೂಲಕ ಇಡೀ ವ್ಯವಸ್ಥೆ ತಿದ್ದಿದ ಮಹಾನ್ ಬೆಳಕು ಅಂಬೇಡ್ಕರ್ ಆಗಿದ್ದು, ಅವರ ಬದುಕು ಅರಿತು ಸಂವಿಧಾನದಡಿಯಲ್ಲಿ ಬದುಕುವುದನ್ನು ಕಲಿಯಬೇಕಿದೆ ಎಂದು ನುಡಿದರು.
ಎನ್‌ಸಿಸಿ ಘಟಕ ಯೋಜನಾಧಿಕಾರಿ ಎಸ್.ಎಂ. ಬಸವರಾಜು, ಶಿಕ್ಷಕರಾದ ಬಿ.ಎನ್. ಪರಶಿವಮೂರ್ತಿ, ದೀಪಕ್, ಗಿರೀಶ್, ಪಲ್ಲವಿ, ಸಂಜನಾ, ಲೀಲಾವತಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net