ಮದ್ದೂರು: ನಗರದ ಡಾ.ಎಚ್.ಕೆ.ಮರಿಯಪ್ಪ ಕಾನ್ವೆಂಟಿನ ಡಾ.ಶಾಂತ ಮರಿಯಪ್ಪ ಸಭಾಂಗಣದಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಗಳ ವತಿಯಿಂದ ಮಂಗಳವಾರ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಎಂ.ಎಚ್.ಚನ್ನೇಗೌಡಗೌಡ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ ಮಾತನಾಡಿ, ಅಂಬೇಡ್ಕರ್ ಕೇವಲ ಸಂವಿಧಾನ ರಚನೆಕಾರರಲ್ಲ, ಅವರು ಪ್ರಖ್ಯಾತ ಆರ್ಥಿಕ ತಜ್ಞರು, ಮಹಿಳಾ ಹಕ್ಕುಗಳ ಹೋರಾಟಗಾರರು ಮತ್ತು ಸಮಾಜದಲ್ಲಿನ ಅಸಮಾನತೆಯ ವಿರುದ್ಧ ನಿರಂತರವಾಗಿ ಹೋರಾಡಿದ ಚಿಂತಕರು. ಅವರ ದೃಷ್ಟಿ ಕೇವಲ ಕಾನೂನು ಚೌಕಟ್ಟಿನ ನಿರ್ಮಾಣಕ್ಕೆ ಸೀಮಿತವಾಗಿರಲಿಲ್ಲ ಅದು ಸಂಪೂರ್ಣ ಭಾರತೀಯ ಸಮಾಜದ ಪುನರ್‌ರಚನೆಗೆ ಸಂಬಂಧಪಟ್ಟಿತ್ತು ಎಂದು ಹೇಳಿದರು.