ಗ್ರಾಮದ ಹೊರವಲಯದಲ್ಲಿ ಶಕ್ತಿದೇವತೆ ಗುಂಡುಮಾರಿಯಮ್ಮ ದೇಗುಲವಿದೆ. ಬೀಗರ ಔತಣ, ನಾಮಕರಣ ಸೇರಿದಂತೆ ವಿವಿಧ ಹರಕೆಗಳನ್ನು ತೀರಿಸಲು ಬರುವ ಭಕ್ತರು ದೇವಿಗೆ ಮಾಂಸದ ಅಡುಗೆ ನೈವೇದ್ಯ ಅರ್ಪಿಸುತ್ತಾರೆ. ಮಾಂಸದ ಊಟದ ರುಚಿ ಕಂಡಿರುವ ಬೀದಿನಾಯಿಗಳು ಈ ಸ್ಥಳದಲ್ಲಿಯೇ ಠಿಕಾಣಿ ಹೂಡಿವೆ. ಅಲ್ಲದೆ ಗ್ರಾಮ ಹಾಗೂ ತೋಟದ ಮನೆಗಳಲ್ಲಿ ಜೀವನೋಪಾಯಕ್ಕಾಗಿ ಸಾಕಿರುವ ಕುರಿ, ಕೋಳಿ, ಮೇಕೆ, ಜಾನುವಾರುಗಳ ಮೇಲೆ ಬೀದಿ ನಾಯಿಗಳು ಪ್ರತಿದಿನವೂ ದಾಳಿ ಮಾಡುತ್ತಿವೆ.