ಬೂವನಹಳ್ಳಿ ಡೇರಿಗೆ ನಿರ್ದೇಶಕರ ಆಯ್ಕೆ

ಕಿಕ್ಕೇರಿ ಹೋಬಳಿಯ ಬೂವನಹಳ್ಳಿ ಡೇರಿ ಚುನಾವಣೆಯಲ್ಲಿ ಚುನಾಯಿತರಾದ ನಿರ್ದೇಶಕರಿಗೆ ಮನ್‌ಮುಲ್ ನಿರ್ದೇಶಕ ಡಾಲು ರವಿ ಅಭಿನಂದನೆ ಸಲ್ಲಿಸಿದರು. ಭಾಗ್ಯಮ್ಮ, ಲಲಿತಮ್ಮ, ಶೋಭಾ, ಜಗದಾಂಬಾ, ಮೀನಾಕ್ಷಿ, ಶೈಲಜಾ, ಪುಷ್ಪಲತಾ ಇತರರಿದ್ದರು.
ಕಿಕ್ಕೇರಿ ಹೋಬಳಿಯ ಬೂವನಹಳ್ಳಿ ಡೇರಿ ಚುನಾವಣೆಯಲ್ಲಿ ಚುನಾಯಿತರಾದ ನಿರ್ದೇಶಕರಿಗೆ ಮನ್‌ಮುಲ್ ನಿರ್ದೇಶಕ ಡಾಲು ರವಿ ಅಭಿನಂದನೆ ಸಲ್ಲಿಸಿದರು. ಭಾಗ್ಯಮ್ಮ, ಲಲಿತಮ್ಮ, ಶೋಭಾ, ಜಗದಾಂಬಾ, ಮೀನಾಕ್ಷಿ, ಶೈಲಜಾ, ಪುಷ್ಪಲತಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾಲು ರವಿ, ಎಂ.ಬಿ.ಹರೀಶ್ ಬಣದ 8 ಸದಸ್ಯರು ಮೇಲುಗೈ
ಕಿಕ್ಕೇರಿ: ಹೋಬಳಿಯ ಬೂವನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಭಾನುವಾರ ನಡೆಯಿತು. ಮನ್‌ಮುಲ್ ನಿರ್ದೇಶಕ ಡಾಲು ರವಿ ಹಾಗೂ ಎಂ.ಬಿ.ಹರೀಶ್ ಬಣದ 8 ಸದಸ್ಯರು ಮೇಲುಗೈ ಸಾಧಿಸಿದರು.
ಮನ್‌ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ಡೇರಿ ಅಭಿವೃದ್ಧಿಗೆ ಎಲ್ಲ ನಿರ್ದೇಶಕರು ಒಂದಾಗಿ ಶ್ರಮಿಸಲು ಕರೆ ನೀಡಿದರು. ಎಂ.ಬಿ.ಹರೀಶ್ ಮಾತನಾಡಿ, ಡೇರಿಯೊಳಗೆ ಯಾವುದೇ ರೀತಿಯ ರಾಜಕೀಯ ಬೆರಸದೆ ಹೈನುಗಾರಿಕೆ ಗ್ರಾಮದ ಅಭಿವೃದ್ಧಿಯ ಸಂಕೇತ ಎಂದು ತಿಳಿಸಲು ಮುಂದಾಗಿ. ಗ್ರಾಮದಲ್ಲಿ ಡೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಮನ್‌ಮುಲ್ ನಿರ್ದೇಶಕ ಡಾಲು ರವಿ ಅಭಿನಂದಿಸಿದರು. ಭಾಗ್ಯಮ್ಮ, ಲಲಿತಮ್ಮ, ಶೋಭಾ, ಜಗದಾಂಬಾ, ಮೀನಾಕ್ಷಿ, ಶೈಲಜಾ, ಪುಷ್ಪಲತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net