ಪಿ.ಎಸ್.ಎನ್ ಸಪ್ಲೆಚೈನ್ ಸಲ್ಯೂಷನ್ಸ್ ಲಿಮಿಟೆಡ್‌ನಲ್ಲಿ ಆಪರೇಟರ್ ಮತ್ತು ಟೆಕ್ನಿಕಲ್ ಅಸೋಸಿಯೆಟ್ 500 ಹುದ್ದೆ ಖಾಲಿ ಇದೆ. ಎಸ್‌ಎಸ್‌ಎಲ್ಸಿ, ಪಿಯುಸಿ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18 ರಿಂದ 30 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು. ಮಾಸಿಕ 18 ಸಾವಿರ ರೂ. ವೇತನದ ಜತೆಗೆ ಇತರೆ ಭತ್ಯೆ ಸಿಗಲಿದೆ. ಸ್ವತಂತ್ರ ಮೈಕ್ರೋ ಫೈನಾನ್ಸ್‌ನಲ್ಲಿ ಖಾಲಿ ಇರುವ 15 ಫೀಲ್ಡ್ ಆಫೀಸರ್ಸ್‌ಗೆ ಎಸ್‌ಎಸ್‌ಎಲ್ಸಿ, ಪಿಯುಸಿ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18 ರಿಂದ 35 ವರ್ಷದೊಳಗಿನವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದವರಿಗೆ ಮಾಸಿಕ 15 ರಿಂದ 18 ಸಾವಿರ ರೂ. ವೇತನದ ಜತೆಗೆ ಇತರೆ ಭತ್ಯೆ ನೀಡಲಾಗುವುದು. ಅವಧೂತ ಚಾರಿಟಬಲ್ ಟ್ರಸ್ಟ್‌ನಲ್ಲಿ 100 ವರ್ಕ್ ಫ್ರಂ ಹೋಂ ಹುದ್ದೆಗೆ ಎಸ್‌ಎಸ್‌ಎಲ್ಸಿ ಮೇಲ್ಪಟ್ಟ 18 ವರ್ಷ ತುಂಬಿದವರನ್ನು ನೇಮಿಸಲಾಗುವುದು. ಹುದ್ದೆಗೆ ಅವಲಂಬಿತವಾಗಿ ವೇತನ ಸಿಗಲಿದೆ.