ಪರಿಸರ ರಕ್ಷಣೆಗೆ ಧರ್ಮಸ್ಥಳ ಸಂಸ್ಥೆ ಶ್ರಮ

ಕಿಕ್ಕೇರಿ ಹೋಬಳಿಯ ಆನೆಗೊಳ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರಿಸರ ದಿನ ಆಚರಿಸಿತು. ಪುರುಷೋತ್ತಮ್, ನಳಿನಾ, ನವೀನ್‌ಕುಮಾರ್, ಪ್ರವೀಣ್, ಕೆ.ಎಸ್.ರಾಜೇಗೌಡ, ಮಂಜುಳಾ  ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ಆನೆಗೊಳ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರಿಸರ ದಿನ ಆಚರಿಸಿತು. ಪುರುಷೋತ್ತಮ್, ನಳಿನಾ, ನವೀನ್‌ಕುಮಾರ್, ಪ್ರವೀಣ್, ಕೆ.ಎಸ್.ರಾಜೇಗೌಡ, ಮಂಜುಳಾ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಶಿಕ್ಷಕ ಪುರುಷೋತ್ತಮ ಅಭಿಮತ
ಕಿಕ್ಕೇರಿ: ಪರಿಸರ ಜಾಗೃತಿ ಮೂಡಿಸಿ ಆರೋಗ್ಯಯುತ ಜೀವನ ರೂಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವಿರತವಾಗಿ ಶ್ರಮಿಸುತ್ತಿದೆ ಎಂದು ಮುಖ್ಯ ಶಿಕ್ಷಕ ಪುರುಷೋತ್ತಮ ತಿಳಿಸಿದರು.
ಹೋಬಳಿಯ ಆನೆಗೊಳ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆನೆಗೊಳ ವಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆ ಕೇವಲ ಸಾಲ ಉಳಿತಾಯ, ಆರ್ಥಿಕ ವ್ಯವಹಾರಕ್ಕೆ ಸೀಮಿತವಾಗದೆ ಜನೋಪಯೋಗಿ ಕೆಲಸ ಮಾಡುತ್ತಿದೆ. ಈ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಗಿಡ ನೆಟ್ಟು ಪೋಷಿಸುತ್ತಿದೆ. ಮಕ್ಕಳಿಗೆ ಮರಗಿಡಗಳ ಪಾತ್ರ ಪರಿಚಯ ಮಾಡಿಕೊಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು.
ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷೆ ನಳಿನಿ ಮಾತನಾಡಿ, ವೀರೇಂದ್ರ ಹೆಗ್ಗಡೆಯವರು ಕೇವಲ ದೇಗುಲ ಅಭಿವೃದ್ಧಿಗೆ ಮುಂದಾಗದೆ ಲಕ್ಷಾಂತರ ಸ್ವಸಹಾಯ ಸಂಘಗಳ ಮೂಲಕ ಗ್ರಾಮಾಭಿವೃದ್ಧಿ, ಕೆರೆ ಕಟ್ಟೆ ಅಭಿವೃದ್ಧಿ, ಶಾಲಾ ತೋಟ ನಿರ್ಮಾಣ, ಶಿಕ್ಷಕರನ್ನು ನೀಡುವಿಕೆ, ಘನತ್ಯಾಜ್ಯ ನಿರ್ವಹಣೆಯಂತಹ ಹತ್ತಾರು ಕೆಲಸ ಮಾಡುತ್ತಿದೆ. ಮಕ್ಕಳು ಗಿಡಮರಗಳ ಬೆಳೆಸಿ, ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಮರವಿದ್ದರೆ ನಾಡು, ಕಾಡಿದ್ದರೆ ಉಸಿರು, ಜೀವ, ಜೀವನಕ್ಕೆ ಪರಿಸರದ ಪಾತ್ರ ಮುಖ್ಯ. ಮರಗಿಡ ಶುದ್ಧಗಾಳಿ ನೀಡುವುದರ ಜತೆ ಅಂರ್ತಜಲ ಹೆಚ್ಚಿಸಲಿದೆ. ಮಣ್ಣಿನ ಫಲವತ್ತತೆ, ಭೂಸವಕಳಿ ತಪ್ಪಿಸಲಿದೆ ಎಂದು ಮಾಹಿತಿ ನೀಡಿದರು.
ಶಾಲಾವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ನೀರೆರೆದು ಹೆಮ್ಮರವಾಗಿ ಬೆಳೆಸಲು ತಿಳಿ ಹೇಳಲಾಯಿತು. ಮಕ್ಕಳು ಗಿಡಮರಗಳನ್ನು ಬೆಳೆಸಲು ಪ್ರತಿಜ್ಞೆ ಮಾಡಿದರು.
ಮೇಲ್ವಿಚಾರಕ ನವೀನ್‌ಕುಮಾರ್, ಕೃಷಿ ಮೇಲ್ವಿಚಾರಕ ಕೆ.ಟಿ. ಪ್ರವೀಣ್, ಕೆ.ಎಸ್. ರಾಜೇಗೌಡ, ಸೇವಾ ಪ್ರತಿನಿಧಿ ಮಂಜುಳಾ, ಶಿಕ್ಷಕ ಸಮೂಹ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net