ವಿಷ್ಣು ನಾಮಸ್ಮರಣೆ ಮೊಳಗಿಸಿದ ಭಕ್ತರು

 ಕಿಕ್ಕೇರಿ ಹೋಬಳಿಯ ಬೋಳಮಾರನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಿಕ್ಕೇರಿ ಹೋಬಳಿಯ ಬೋಳಮಾರನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
Published on

ಕಿಕ್ಕೇರಿ:

ಹೋಬಳಿಯಾದ್ಯಂತ ವಿಷ್ಣು ದೇಗುಲಗಳಲ್ಲಿ ಶ್ರಾವಣ ಮಾಸದ ಶನಿವಾರ ವಿಜೃಂಭಣೆಯಿಂದ ಪೂಜೆಗಳು ನೆರವೇರಿದವು.

ಭಕ್ತರು ವಿಷ್ಣುನಾಮ ಸ್ಮರಣೆ ಮೊಳಗಿಸಿದರು. ಬೋಳಮಾರನಹಳ್ಳಿಯ ವೇಣುಗೋಪಾಲಸ್ವಾಮಿ ದೇವರು, ಕಂಬದ ನರಸಿಂಹಸ್ವಾಮಿ ದೇವರಿಗೆ ಗ್ರಾಮಸ್ಥರು ಸಾಮೂಹಿಕವಾಗಿ ಭಾಗವಹಿಸಿ ದೇವರಿಗೆ ವಿವಿಧ ಪೂಜೆ, ಹೋಮ ಹವನಾದಿಗಳನ್ನು ಹಮ್ಮಿಕೊಂಡಿದ್ದರು. ಭಜನೆ, ಕೀರ್ತನೆ, ವಿಷ್ಣು ಸಹಸ್ರನಾಮ ಪಠಣ ಮಾಡಿದರು. ಇದೇ ದೇಗುಲದಲ್ಲಿರುವ ರಾಮಾನುಜಾಚಾರ್ಯರು, ಆಳ್ವರ್, ರುಕ್ಮಿಣಿ, ಸತ್ಮಭಾಮಾ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಕೃಷ್ಣಾಪುರ ಗ್ರಾಮದಲ್ಲಿ ಚಲುವನಾರಾಯಣಸ್ವಾಮಿ ದೇಗುಲದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿತು.
ಮಕ್ಕಳು ದೇವರ ಹೆಸರಿನಲ್ಲಿ ಉಪಾದನ್ನ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಹಣೆಯಲ್ಲಿ ವಿಷ್ಣುನಾಮವನ್ನು ಧಾರಣೆ ಮಾಡಿಕೊಂಡು ಕೈಯಲ್ಲಿ ಲೋಟ, ಚೊಂಬುಗಳನ್ನು ಹಿಡಿದು ಗೋವಿಂದ ಗೋವಿಂದ ಎಂದು ಕೂಗುತ್ತ ಮನೆ, ಅಂಗಡಿಗಳಿಗೆ ಸಾರಿದರು. ರಾಗಿ, ಅಕ್ಕಿ, ಹಿಟ್ಟನ್ನು ಬೂನಾಸಿಗೆ ತುಂಬಿಸಿಕೊಂಡರು.
ಗೂಡೇಹೊಸಹಳ್ಳಿ ಶ್ರೀನಿವಾಸ, ಪಟ್ಟಣದ ನರಸಿಂಹಸ್ವಾಮಿ, ಗೋವಿಂದನಹಳ್ಳಿಯ ವೇಣುಗೋಪಾಲಸ್ವಾಮಿ, ಸಿದ್ದಾಪುರ ವೆಂಕಟೇಶ್ವರ ದೇಗುಲ ಮತ್ತಿತರ ಗ್ರಾಮಗಳಲ್ಲಿ ಉಪವಾಸ ವ್ರತದಿಂದ ದೇವರನ್ನು ಪೂಜಿಸಲಾಯಿತು. ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net