ಮೇಲುಕೋಟೆಯಲ್ಲಿ ಪ್ರೌಢಶಾಲೆ ಶೀಘ್ರ ಆರಂಭಿಸುವಂತೆ ಆಗ್ರಹ

ಮೇಲುಕೋಟೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕು ಎಂದು ಸರ್ಕಾರಿ ಶಾಲೆ ನನ್ನವ್ವ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಮುಖಂಡರು ಒತ್ತಾಯಿಸಿದರು. ಇಂಡವಾಳು ಚಂದ್ರಶೇಖರ್, ಬೆಟ್ಟಸ್ವಾಮಿಗೌಡ.
ಮೇಲುಕೋಟೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕು ಎಂದು ಸರ್ಕಾರಿ ಶಾಲೆ ನನ್ನವ್ವ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಮುಖಂಡರು ಒತ್ತಾಯಿಸಿದರು. ಇಂಡವಾಳು ಚಂದ್ರಶೇಖರ್, ಬೆಟ್ಟಸ್ವಾಮಿಗೌಡ.
Published on
ಮೇಲುಕೋಟೆ: ಮೇಲುಕೋಟೆಯ ಶತಮಾನದ ಸರ್ಕಾರಿ ಶಾಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸೂಚನೆಯಂತೆ ಈ ವರ್ಷದಿಂದಲೇ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಿ ಎಂಟನೇ ತರಗತಿ ಆರಂಭಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ್ ಆಗ್ರಹಿಸಿದರು.
ಮೇಲುಕೋಟೆಯಲ್ಲಿ ಮಂಗಳವಾರ ಸರ್ಕಾರಿ ಶಾಲೆ ನನ್ನವ್ವ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿ, ಮೇಲುಕೋಟೆ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಮಕ್ಕಳು ಪ್ರೌಢಶಾಲೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ದೂರದ ಊರಿಗೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಹೋಗುತ್ತಿದ್ದಾರೆ. ಹೆಣ್ಣು ಮಕ್ಕಳ ಕಷ್ಟ ಹೇಳತೀರದಂತಾಗಿದ್ದು ಈ ಶೈಕ್ಷಣಿಕ ವರ್ಷದಿಂದಲೇ 8ನೇ ತರಗತಿಗೆ ಮಕ್ಕಳನ್ನು ದಾಖಲಿಸಿಕೊಂಡು ಶಾಲೆ ಉನ್ನತೀಕರಿಸದಿದ್ದರೆ ಮಂಡ್ಯ ಉಪನಿರ್ದೇಶಕರ ಕಚೇರಿಗೆ ಬೀಗಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
ಮೇಲುಕೋಟೆಯ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಹೆಣ್ಣು ಮಕ್ಕಳು ಶಾಲೆಯನ್ನೇ ತೊರೆಯುವಂತಾಗಿದೆ. ಸರ್ಕಾರದ ಶಿಕ್ಷಣ ನೀತಿಯಂತೆಯೇ ಮೇಲುಕೋಟೆ ಶತಮಾನದ ಶಾಲೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕು ಎಂದರು.
ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿಗೌಡ ಮಾತನಾಡಿ, ಸರ್ಕಾರಿ ಪ್ರೌಢಶಾಲೆ ಅಗತ್ಯವಿದೆ ಎಂ 2025ರ ಮೇ ತಿಂಗಳಲ್ಲಿ ಮೇಲುಕೋಟೆ ಶಾಸಕರು ಪತ್ರಬರೆದಿದ್ದಾರೆ. ಶಿಕ್ಷಣ ಇಲಾಖೆ ಆಯುಕ್ತರು ಸಹ ಮಂಡ್ಯ ಉಪನಿರ್ದೇಶಕರಿಗೆ ಸ್ಪಷ್ಟ ಪ್ರಸ್ತಾವನೆ ಸಲ್ಲಿಸಲು 2025ರ ಡಿಸೆಂಬರ್ ಮಾಹೆಯಲ್ಲೇ ಆದೇಶ ನೀಡಿದ್ದಾರೆ. ಆದರೆ, ಈವರೆಗೆ ಆದೇಶ ಬಂದಿಲ್ಲ.
ಮಂಡ್ಯ ಕಚೇರಿಯಿಂದ ಪ್ರಸ್ತಾವನೆ ಸಲ್ಲಿಸಿದ್ದು ಆಯುಕ್ತರಿಂದ ಆದೇಶ ಬರುತ್ತದೆ ಎಂದು ಈಗ ಹೇಳುತ್ತಿದ್ದೀರಿ. ಎಲ್ಲಿಂದಾದರೂ ಆದೇಶ ತನ್ನಿ. ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ವಾರದೊಳಗೆ 8ನೇ ತರಗತಿಗೆ ಮಕ್ಕಳನ್ನು ದಾಖಲಿಸಿಕೊಂಡು ತರಗತಿ ಆರಂಭಿಸಬೇಕು. ಇಲ್ಲವಾದರೆ ಡಿಡಿಪಿಐ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net