ರೈತರಿಗೆ ಪಹಣಿ ಪತ್ರ ನೀಡುವಂತೆ ಆಗ್ರಹ

ತಾಲೂಕು ಕಚೇರಿಯ ಪಹಣಿ ಕೇಂದ್ರದಲ್ಲಿ ರೈತರಿಗೆ ಪಹಣಿ ಪತ್ರ ಹಾಗೂ ಎಂ.ಆರ್.ಕಾಪಿಗಳನ್ನು ನೀಡದೆ ಕೇಂದ್ರ ಬಂದ್ ಮಾಡಿರುವ ನಡೆ ಖಂಡಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತಹಸೀಲ್ದಾರ್ ಚೇತನಾ ಯಾದವ್ ಅವರನ್ನು ಪ್ರಶ್ನಿಸಿದರು.
ತಾಲೂಕು ಕಚೇರಿಯ ಪಹಣಿ ಕೇಂದ್ರದಲ್ಲಿ ರೈತರಿಗೆ ಪಹಣಿ ಪತ್ರ ಹಾಗೂ ಎಂ.ಆರ್.ಕಾಪಿಗಳನ್ನು ನೀಡದೆ ಕೇಂದ್ರ ಬಂದ್ ಮಾಡಿರುವ ನಡೆ ಖಂಡಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತಹಸೀಲ್ದಾರ್ ಚೇತನಾ ಯಾದವ್ ಅವರನ್ನು ಪ್ರಶ್ನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರ ಪ್ರತಿಭಟನೆ
ಶ್ರೀರಂಗಪಟ್ಟಣ: ತಾಲೂಕು ಕಚೇರಿಯ ಪಹಣಿ ಕೇಂದ್ರದಲ್ಲಿ ರೈತರಿಗೆ ಪಹಣಿ ಪತ್ರ ಹಾಗೂ ಎಂ.ಆರ್.ಕಾಪಿಗಳನ್ನು ನೀಡದೆ ಕೇಂದ್ರ ಬಂದ್ ಮಾಡಿರುವ ನಡೆ ಖಂಡಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿಗೆ ಸಮಿತಿ ಕಾರ್ಯಕರ್ತರು ಮಂಗಳವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಳೆದ 1 ತಿಂಗಳಿಗೂ ಅಧಿಕ ಕಾಲದಿಂದ ತಾಲೂಕು ಕಚೇರಿಯ ಪಹಣಿ ಕೇಂದ್ರದಲ್ಲಿ ಎ4 ಪತ್ರಗಳು ಇಲ್ಲ ಎಂಬ ನೆಪ ಹೇಳಿ ಪಹಣಿ ಪತ್ರ ಹಾಗೂ ಎಂ.ಆರ್.ಕಾಪಿಗಳನ್ನು ನೀಡುತ್ತಿಲ್ಲ. ಜತೆಗೆ ರೈತರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಗಂಟೆ ಗಟ್ಟಲೆ ಕಾಯಿಸಿ ಅಲೆದಾಡಿಸುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.
ತಹಸೀಲ್ದಾರ್ ಚೇತನಾ ಯಾದವ್ ಮಾತನಾಡಿ, ಕಳೆದ 1 ವರ್ಷದಿಂದ ಜಿಲ್ಲಾಡಳಿತ ಮೂಲಕ ಎ4 ಪತ್ರಗಳು ಮತ್ತು ಸ್ಟೇಷನರಿ ವಸ್ತುಗಳು ಸರಬರಾಜು ಆಗಿಲ್ಲ. ಹಾಗಾಗಿ ಪಹಣಿ ಕೇಂದ್ರದಲ್ಲಿ ಪಹಣಿ ಪತ್ರ ಸೇರಿದಂತೆ ಯಾವುದೇ ಕಾಪಿಗಳನ್ನು ನೀಡಲಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ತಂದಿದ್ದು, ಸರ್ಕಾರಕ್ಕೂ ಪತ್ರ ಬರೆಯಲಾಗಿದೆ. ಶೀಘ್ರವೇ ಸರ್ಕಾರದಿಂದ ಅಗತ್ಯ ಸ್ಟೇಷನರಿ ವಸ್ತುಗಳು ಸಿಗುವ ಭರವಸೆ ಇದೆ. ಸದ್ಯಕ್ಕೆ ಭೂಮಿ ಶಾಖೆಯಿಂದ ಪಹಣಿ ವಿತರಿಸಲು ಕ್ರಮವಹಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮುತ್ತಿಗೆ ಹಿಂಪಡೆದರು.
ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ಸದಸ್ಯರಾದ ಮೇಳಾಪುರ ಶಿವಣ್ಣ, ಕೆಂಪೇಗೌಡ, ಜಯರಾಮು, ಶ್ರೀನಿವಾಸ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net