ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹ

ರೈತರ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ಕೊಪ್ಪ ವೃತ್ತ ಘಟಕ ವತಿಯಿಂದ ಕೊಪ್ಪದಲ್ಲಿ ಉಪ ತಹಸೀಲ್ದಾರ್ ರಾಘವೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕೀಳಘಟ್ಟ ನಂಜುಂಡಯ್ಯ, ಪ್ರಭುಲಿಂಗು ಇತರರು ಇದ್ದರು.
ರೈತರ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ಕೊಪ್ಪ ವೃತ್ತ ಘಟಕ ವತಿಯಿಂದ ಕೊಪ್ಪದಲ್ಲಿ ಉಪ ತಹಸೀಲ್ದಾರ್ ರಾಘವೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕೀಳಘಟ್ಟ ನಂಜುಂಡಯ್ಯ, ಪ್ರಭುಲಿಂಗು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪ ತಹಸೀಲ್ದಾರ್ ರಾಘವೇಂದ್ರಗೆ ಮನವಿ
ಮದ್ದೂರು: ತಾಲೂಕಿನ ಕೊಪ್ಪದಲ್ಲಿ ನಡೆದ ರೈತ ಸಂಘದ ಸಂಸ್ಥಾಪಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹಾಗೂ ರೈತ ಪರ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಂಸ್ಮರಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ಕೊಪ್ಪ ವೃತ್ತ ಘಟಕ ವತಿಯಿಂದ ಉಪ ತಹಸೀಲ್ದಾರ್ ರಾಘವೇಂದ್ರ ಅವರಿಗೆ ಇತ್ತೀಚೆಗೆ ಮನವಿ ಪತ್ರ ಸಲ್ಲಿಸಲಾಯಿತು.
ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ರಾಜ್ಯದಲ್ಲಿ ಏಕರೂಪ ಶಿಕ್ಷಣ ಜಾರಿಯಾಗಬೇಕು. ರಾಜ್ಯದಲ್ಲಿ ಏಕರೂಪದ ಕಬ್ಬಿನ ದರ ನಿಗದಿಯಾಗಬೇಕು ಹಾಗೂ ಕಡುಗೂಲಿ-ಒಡಗೂಲಿಯನ್ನು (ಸಾಗಣೆ ವೆಚ್ಚ) ಕಾರ್ಖಾನೆ ಆಡಳಿತ ಮಂಡಳಿಯೇ ವಹಿಸಿಕೊಳ್ಳಬೇಕು. ಶಿಂಷಾ ಎಡ ಮತ್ತು ಬಲದಂಡೆ ನಾಲಾ ಅಚ್ಚುಕಟ್ಟು ಪ್ರದೇಶ, ವಿ.ಸಿ.ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿರುವುದರಿಂದ ಕೆರಗೋಡು ನಾಲೆಯಿಂದ ನೇರವಾಗಿ ಕೊಪ್ಪದ ಕೆರೆಯ ಮೂಲಕ ಅಥವಾ ಮಾರ್ಕೋನಹಳ್ಳಿ ಡ್ಯಾಂ ಮೂಲಕ ಶಿಂಷಾ ನಾಲೆಗೆ ನೀರು ಬಿಡಬೇಕು. ರೈತರು ಬೆಳೆದ ಕಬ್ಬು ಬೆಳೆಗೆ ವಿಮೆ ಜಾರಿಯಾಗಬೇಕು ಎಂದರು.
ಸರ್ಕಾರ ವಿದ್ಯುತ್‌ಚ್ಛಕ್ತಿ ಖಾಸಗೀಕರಣ ಕೈ ಬಿಡಬೇಕು ಹಾಗೂ ಬೀಜ ಮಸೂದೆ ಕಾಯಿದೆಯನ್ನು ಹಿಂಪಡೆಯಬೇಕು. ರೈತರ ಆತ್ಮಹತ್ಯೆ ತಡೆಯಲು ಕೇಂದ್ರ ಸರ್ಕಾರ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ರೈತರ ಎಲ್ಲ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಮತ್ತು ಸಾಲ ವಸೂಲಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡುವುದನ್ನು ತಡೆಹಿಡಿಯಬೇಕು ಎಂದು ಹೇಳಿದರು.
ರೈತ ವಿರೋಧಿ ಕೃಷಿ ಮಸೂದೆಯನ್ನು ಹಿಂಪಡೆಯಬೇಕು. ತಾಲೂಕಿನ ಕೊಪ್ಪದ ಕೆರೆ 504 ಎಕರೆ ಇದ್ದು ಸರ್ವೇ ಮಾಡಿ ಹೂಳು ತೆಗೆದು ಆಧುನೀಕರಣಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ರೈತ ಮುಖಂಡರಾದ ಎಚ್.ಜಿ.ಪ್ರಭುಲಿಂಗು, ಸೊ.ಸಿ.ಪ್ರಕಾಶ್, ಜಗದೀಶ್, ಶ್ರೀಧರ್, ಚಂದ್ರ, ಶ್ರೀನಿವಾಸ್, ರಮೇಶ, ಲಿಂಗರಾಜು, ಯೋಗೇಶ್, ಉಮೇಶ್, ವೆಂಕಟೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net