ಕಾಡಾನೆಗಳಿಂದ ಮಾವಿನ ಮರಗಳಿಗೆ ಹಾನಿ

ಮಳವಳ್ಳಿ ತಾಲೂಕಿನ ನೆಟ್ಕಲ್ ಬಳಿ ಇರುವ ವಿಆರ್ ಎಸ್ ದೊಡ್ಡಿ  ರೈತ ಕಮಲ್ ಷರೀಫ್ ಅವರ ತೋಟದಲ್ಲಿ ಕಾಡಾನೆಗಳ ದಾಳಿಯಿಂದ ಮಾವಿನ ಮರ ನಾಶವಾಗಿದೆ.
ಮಳವಳ್ಳಿ ತಾಲೂಕಿನ ನೆಟ್ಕಲ್ ಬಳಿ ಇರುವ ವಿಆರ್ ಎಸ್ ದೊಡ್ಡಿ ರೈತ ಕಮಲ್ ಷರೀಫ್ ಅವರ ತೋಟದಲ್ಲಿ ಕಾಡಾನೆಗಳ ದಾಳಿಯಿಂದ ಮಾವಿನ ಮರ ನಾಶವಾಗಿದೆ.
Published on
ಮಳವಳ್ಳಿ: ತಾಲೂಕಿನ ನೆಟ್ಕಲ್ ರಸ್ತೆಯ ವಿ.ಆರ್.ಎಸ್. ದೊಡ್ಡಿ ಗ್ರಾಮದ ಸಮೀಪದಲ್ಲಿರುವ ತೋಟಕ್ಕೆ ಮಂಗಳವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು 40 ಮಾವಿನ ಮರಗಳನ್ನು ಮುರಿದು ಹಾಳು ಮಾಡಿವೆ.
ರೈತ ಕಮಾಲ್ ಶರೀಫ್ ಅವರ ಜಮೀನಿಗೆ ತಡರಾತ್ರಿ ನುಗ್ಗಿದ ಕಾಡಾನೆಗಳು, ಫಸಲು ಬಿಟ್ಟಿದ್ದ ಮರಗಳನ್ನು ಮುರಿದು ನಾಶಪಡಿಸಿದೆ. ಕಾವೇರಿ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ವನ್ಯಜೀವಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳೆ ಕೈಗೆ ಸಿಗುವ ಸಮಯದಲ್ಲೇ ನಾಶವಾಗುತ್ತಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಕಷ್ಟಪಟ್ಟು ಬೆಳೆದ ಬೆಳೆ ಈ ರೀತಿ ನಾಶವಾಗಿದೆ. ವನ್ಯಜೀವಿಗಳ ಹಾವಳಿ ನಿಯಂತ್ರಣದಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದ ರೈತ ಕಮಲ್ ಷರೀಫ್, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟವನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net