ಅಭಿಮಾನಿಗಳ ಬಳಗದಿಂದ ಡಾಲು ರವಿ ಜನ್ಮ ದಿನ

ಮನ್ಮುಲ್ ನಿರ್ದೇಶಕ ಡಾಲು ರವಿ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
Published on
ಕೆ.ಆರ್.ಪೇಟೆ: ಮನ್ಮುಲ್ ನಿರ್ದೇಶಕ ಡಾಲು ರವಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಬಳಗದ ವತಿಯಿಂದ ಬುಧವಾರ ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ಶ್ರೀ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಆಸ್ಪತ್ರೆಯ ಒಳ, ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಪಟ್ಟಣದ ಹೊರವಲಯದಲ್ಲಿರುವ ಮಾತೃಭೂಮಿ ವೃದ್ಧಾಶ್ರಮದಲ್ಲಿರುವ ಅನಾಥರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾಸಲು ಗ್ರಾಮದ ಶಂಭುಲಿಂಗೇಶ್ವರ, ಹೊಸಹೊಳಲು ಗ್ರಾಮದ ಲಕ್ಷ್ಮೀ ನಾರಾಯಣಸ್ವಾಮಿ, ಸಿಂಗಮ್ಮ ಸೇರಿದಂತೆ ಹಲವು ದೇವಾಲಯದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.
ಡಾಲು ರವಿ ನಿವಾಸದಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಲು ಆಗಮಿಸುವವರಿಗೆ ವೇದಿಕೆ ನಿರ್ಮಿಸಲಾಗಿತ್ತು. ಮಂಗಳವಾರದಿಂದಲೇ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು, ರಾಜಕೀಯ ಮುಖಂಡರು ಆಗಮಿಸಿ ಶುಭ ಕೋರಿದರು. ಶುಭಕೋರಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಂಗಳವಾರ ರಾತ್ರಿಯಿಂದ ಬುಧವಾರ ರಾತ್ರಿವರೆಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ಬಾಗೀನ ನೀಡಲಾಯಿತು.
ಮಗಳವಾರ ರಾತ್ರಿ ಚಿಕ್ಕನ್ ಚಾಪ್ಸ್, ಚಿಲ್ಲಿ ಚಿಕನ್, ಫಿಶ್, ಮೊಟ್ಟೆ, ಚಿತ್ರನ್ನ, ಜಿಲೇಬಿ, ಅನ್ನ ಸಾಂಬಾರ್, ಬುಧವಾರ ಬೆಳಗ್ಗೆ ತಟ್ಟೆ ಇಡ್ಲಿ, ಚಿಕ್ಕನ್ ಚಾಪ್ಸ್, ಚಿಲ್ಲಿ ಚಿಕನ್, ಫಿಶ್, ಮೊಟ್ಟೆ, ಮಧ್ಯಾಹ್ನ ಚಿಕನ್, ಫಿಶ್‌ನ ಹಲವು ರೀತಿಯ ಖಾದ್ಯದ ಜತೆಗೆ ಹುರುಳಿ ಕಾಳು ಸಾಂಬಾರ್, ಬೆಣ್ಣೆ ಊಟವನ್ನು ಸಹಸ್ರಾರು ಸಂಖ್ಯೆಯ ಜನರು ಸವಿದರು. ಜನರ ಆಗಮನದ ವೇಳೆ ಜ್ಯೂಸ್, ಐಸ್ ಕ್ರೀಮ್ ವ್ಯವಸ್ಥೆ ಮಾಡಲಾಗಿತ್ತು.
ಆರ್‌ಟಿಒ ಇನ್‌ಸ್ಪೆಕ್ಟರ್ ಸಂಘದ ಅಧ್ಯಕ್ಷ, ಸಮಾಜ ಸೇವಕ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಜೆಡಿಎಸ್ ಮುಖಂಡರಾದ ಕಿಕ್ಕೇರಿ ಕಿರಣ್‌ಕುಮಾರ್, ಅಘಲಯ ಜಾನಕಿರಾಮ್ ಸೇರಿದಂತೆ ಹಲವು ಗಣ್ಯರು ಡಾಲು ರವಿ ಅವರಿಗೆ ಶುಭಕೋರಿದರು.
ಕಾರ್ಯಕ್ರಮದ ಮುಂದಾಳತ್ವವನ್ನು ಹಾದನೂರು ಪರಮೇಶ್, ಅಗ್ರಹಾರಬಾಚಹಳ್ಳಿ ನಾಗೇಶ್, ಕೈಗೋನಹಳ್ಳಿ ಜಯರಾಂ, ಜಾಗಿನಕೆರೆ ಅಂಬರೀಶ್, ಅಶೋಕನಗರ ಬಂಕ್ ಚಂದ್ರಶೇಖರ್, ಸಹೋದರ ಬಜಾಜ್ ಷೋರೂಂ ಸಂತೋಷ್, ಪುತ್ರ ಆರ್ಯನ್‌ಗೌಡ( ಪ್ರೀತಮ್‌ಗೌಡ) ಸೇರಿದಂತೆ ಹಲವರು ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net