ತೈಲೂರು ಸಿ. ಚಲುವರಾಜುಗೆ ಅಭಿನಂದನೆ

ಮದ್ದೂರು ತಾಲೂಕಿನ ಗಡಿಭಾಗ ಮುದಿಗೆರೆ ಗ್ರಾಮದಲ್ಲಿ ಸೋಮನಹಳ್ಳಿಯ ಎಸ್‌ಸಿಎಂಎಂ ಪ್ರೌಢಶಾಲೆಯ ಸ್ನೇಹ ಬಳಗದ ವತಿಯಿಂದ ಡಿಸಿಸಿ ಬ್ಯಾಂಕ್‌ಗೆ ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ತೈಲೂರು ಸಿ.ಚಲುವರಾಜು ಅವರನ್ನು ಅಭಿನಂದಿಸಲಾ ಯಿತು. ನಂದೀಶ್, ಸತೀಶ್, ಸಂಪತ್, ಅಶೋಕ್, ರಾಜು, ಆರ್ಯಾಂಬಿಕ ಗಿರಿ, ವಿನೋದ್, ಸುಗುಣ, ವಿಶಾಲಾಕ್ಷಮ್ಮ, ಲೀಲಾವತಿ, ಶಾಂತಮಣಿ ಇದ್ದರು.

Published on
ಮದ್ದೂರು: ತಾಲೂಕಿನ ಗಡಿಭಾಗ ಮುದಿಗೆರೆ ಗ್ರಾಮದಲ್ಲಿ ಸೋಮನಹಳ್ಳಿಯ ಎಸ್‌ಸಿಎಂಎಂ ಪ್ರೌಢಶಾಲೆಯ ಸ್ನೇಹ ಬಳಗದ ವತಿಯಿಂದ ಡಿಸಿಸಿ ಬ್ಯಾಂಕ್‌ಗೆ ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ತೈಲೂರು ಸಿ.ಚಲುವರಾಜು ಅವರನ್ನು ಭಾನುವಾರ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು ತಾಪಂ ಸದಸ್ಯನಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ರೈತರ ಹಾಗೂ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಅತ್ಯಂತ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನನ್ನ ಸಾಧನೆ ಮೆಚ್ಚಿ ನನ್ನ ಶಾಲಾ ಹಂತದ ಗೆಳೆಯರು ನನಗೆ ಅಭಿನಂದನೆ ಸಲ್ಲಿಸುತ್ತಿರುವುದು ಖುಷಿಯ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಸ್ನೇಹ ಬಳಗದ ನಂದೀಶ್, ಸತೀಶ್, ಸಂಪತ್, ಅಶೋಕ್, ರಾಜು, ಆರ್ಯಾಂಬಿಕಗಿರಿ, ವಿನೋದ್, ಸುಗುಣ, ವಿಶಾಲಾಕ್ಷಮ್ಮ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net