ಸಿದ್ದಾಪುರ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಗುಂಡಿಕೆರೆ ಗ್ರಾಮದಲ್ಲಿ ಸಾಂತ್ವನ ಸಮಿತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಶನಿವಾರ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊಣ್ಣನ್ನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳಲು ಇಂತಹ ಪ್ರೋತ್ಸಾಹ ಮತ್ತು ಸನ್ಮಾನ ಕಾರ್ಯಕ್ರಮಗಳು ಅಗತ್ಯವಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜದಿಂದ ಉತ್ತೇಜನ ದೊರಕಬೇಕು ಎಂದು ಹೇಳಿದರು.
ಬಳಿಕ ಗ್ರಾಮದಲ್ಲಿನ ಬಡ ಕುಟುಂಬಗಳಿಗೆ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ರಫೀಕ್, ಪುರಸಭೆ ಮಾಜಿ ಸದಸ್ಯರಾದ ರಾಫಿ, ಮೊಯಿದು, ರಜಕ್, ಅಕ್ಬರ್, ರಫೀಕ್, ಫಾಕ್ರುದಿನ್, ಶಾಫಿಕ್, ನಿಜರ್, ಅಭಿದ್, ಪಕ್ಷದ ಮುಖಂಡರಾದ ಇಸ್ಮಾಯಿಲ್, ಆಲಿ, ಮಂಜುನಾಥ್, ಯುವ ಬ್ಲಾಕ್ ಅಧ್ಯಕ್ಷ ಶಬೀರ್ ಇತರರು ಇದ್ದರು.