ಮದ್ದೂರು ನಗರಸಭೆ ವತಿಯಿಂದ ಶನಿವಾರ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ಪಥ ಸಂಚಲನದಲ್ಲಿ ಪಾಲ್ಗೊಂಡ ಪೌರಕಾರ್ಮಿಕರನ್ನು ಅಭಿನಂದಿಸಲಾಯಿತು. ಕೆ.ಎಂ.ಉದಯ್, ರಾಧಿಕಾ, ಅರ್ಚನಾ ಆರಾಧ್ಯ ಇತರರಿದ್ದರು.
ಮದ್ದೂರು: ಶನಿವಾರ ದೇಶಾದ್ಯಂತ ಆಚರಿಸಲಾಗುತ್ತಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮದ್ದೂರು ನಗರಸಭೆ ವತಿಯಿಂದ ಪಥ ಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಗರಸಭೆಯ ಪೌರಕಾರ್ಮಿಕರು ಮತ್ತು ವಾಹನ ಚಾಲಕರು ಮೊಟ್ಟಮೊದಲ ಬಾರಿಗೆ ಪಾಲ್ಗೊಂಡು ಗಮನ ಸೆಳೆದರು.
ಪೌರಕಾರ್ಮಿಕರು ಹಾಗೂ ಸ್ವಚ್ಛತಾ ವಾಹನ ಚಾಲಕರನ್ನು ಈ ಪಥ ಸಂಚಲನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಪ್ರೋತ್ಸಾಹಿಸಿದವರು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ಪರಿಸರ) ಅರ್ಚನಾ ಆರಾಧ್ಯ.
ಪೌರಾಯುಕ್ತೆ ರಾಧಿಕಾ ಮಾತನಾಡಿ, ಪಥಸಂಚಲನಕ್ಕೆ ಅಗತ್ಯವಿರುವ ಯೂನಿಫಾರ್ಮ್‌ಗಳನ್ನು ಮದ್ದೂರು ನಗರಸಭೆ ವತಿಯಿಂದ ಪೌರಕಾರ್ಮಿಕರಿಗೆ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಅವರು, ಅದರಂತೆ ಪೌರಕಾರ್ಮಿಕರಿಗೆ ವೈಟ್ ಶರ್ಟ್, ಕಾಕಿ ಪ್ಯಾಂಟ್, ಬ್ಲ್ಯಾಕ್ ಶೂಗಳು ಹಾಗೂ ಆರೆಂಜ್ ಬಣ್ಣದ ಏಪ್ರನ್‌ಗಳನ್ನು ನಗರಸಭೆ ವತಿಯಿಂದ ವಿತರಿಸಲಾಯಿತು.
ಶಾಸಕ ಎಂ.ಉದಯ್, ಪೌರಕಾರ್ಮಿಕರು ಮತ್ತು ವಾಹನ ಚಾಲಕರು ಸೇರಿ ಮೊಟ್ಟಮೊದಲ ಬಾರಿಗೆ ಪಥ ಸಂಚಲನದಲ್ಲಿ ಪಾಲ್ಗೊಂಡಿರುವುದು ನಮ್ಮ ಮದ್ದೂರು ತಾಲೂಕಿಗೆ ಹೆಮ್ಮೆಯ ಹಾಗೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ್ನ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಿದರು.
ಪಥ ಸಂಚಲನಕ್ಕಾಗಿ ಪೌರಕಾರ್ಮಿಕರಿಗೆ ಹಾಗೂ ವಾಹನ ಚಾಲಕರಿಗೆ ಅಭ್ಯಾಸ ಮಾಡಿಸಿ ತರಬೇತಿ ನೀಡಿದ ದೈಹಿಕಶಿಕ್ಷಕ ನಂದೀಶ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಥ್ ನೀಡಿದರು.