ಮಕ್ಕಳ ಸಾಹಿತ್ಯವೆಂದರೆ ತೆನಾಲಿ ರಾಮಕೃಷ್ಣ, ಪಂಚತಂತ್ರ, ಬೀರಬಲ್, ಚಂದಮಾಮನ ಕಥೆಗಳು ಅಥವಾ ಅನುಪಮಾ ನಿರಂಜನರ ಸಾಹಿತ್ಯ ಎಂದು ನಂಬಿದ್ದ ದೊಡ್ಡ ಅಂತರದ ನಡುವೆ ವಸು ವತ್ಸಲೆ, ಅನುಪಮಾ, ಪ್ರಸಾದ ನಾಯ್ಕ ಅವರಂತಹ 63 ಸಾಹಿತಿಗಳು ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸುವತ್ತ ಹೆಜ್ಜೆ ಇಟ್ಟಿರುವುದು ಅಭಿನಂದನೀಯ. ಬಾಹ್ಯಾಕಾಶದ ಸಾಧನೆಗಳು ಪುರುಷರ ಸಾಧನೆ ಎನ್ನುವ ರೀತಿ ಇರುವಾಗ ವಸು ವತ್ಸಲೆ ಅವರು ಬಾಹ್ಯಾಕಾಶದ ವಿಷಯ ತೆಗೆದುಕೊಂಡು ಅದರಲ್ಲಿ ಪುಟ್ಟ ಹುಡುಗಿಯ ಕನಸನ್ನು ಅಂತರಿಕ್ಷದಲ್ಲಿ ವಿಹಾ ಕೃತಿಯಲ್ಲಿ ಮನಗಾಣಿಸಿದ್ದಾರೆ ಎಂದರು.