ಜಾತಿ ಆಧಾರಿತ ರಾಜಕಾರಣಕ್ಕೆ ಮನ್ನಣೆ ಬೇಡ

ನಾಗಮಂಗಲ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿದರು.  ದಲಿತ ಮುಖಂಡರಾದ ಸೋಮನಹಳ್ಳಿ ಅಂದಾನಿ, ಕಂಚಿನಕೋಟೆ ಮೂರ್ತಿ, ಮುಳುಕಟ್ಟೆ ಶಿವರಾಮಯ್ಯ, ನಂಜುಂಡಯ್ಯ, ಕ್ಯಾತನಹಳ್ಳಿ ಮಂಜುನಾಥ್,ಮಹದೇವ್, ಶಿವಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಚನ್ನಪ್ಪ ಇತರರು ಇದ್ದರು.
ನಾಗಮಂಗಲ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿದರು. ದಲಿತ ಮುಖಂಡರಾದ ಸೋಮನಹಳ್ಳಿ ಅಂದಾನಿ, ಕಂಚಿನಕೋಟೆ ಮೂರ್ತಿ, ಮುಳುಕಟ್ಟೆ ಶಿವರಾಮಯ್ಯ, ನಂಜುಂಡಯ್ಯ, ಕ್ಯಾತನಹಳ್ಳಿ ಮಂಜುನಾಥ್,ಮಹದೇವ್, ಶಿವಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಚನ್ನಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಸುರೇಶ್ ಗೌಡ ಅಂಬೇಡ್ಕರ್ ಜಯಂತ್ಯುತ್ಸವ
ನಾಗಮಂಗಲ: ಜಾತಿಗಳ ಹೆಸರಿನಲ್ಲಿ ಮತ ಕೇಳುವ ರಾಜಕಾರಣಿಗಳಿಗೆ ಮಣೆ ಹಾಕದೆ, ಮನುಷ್ಯ ವರ್ಗ ಒಂದೇ ಎನ್ನುವ ರಾಜಕಾರಣಿಗಳನ್ನು ಆಯ್ಕೆ ಮಾಡಿದಾಗ ಮಾತ್ರ ಸಂವಿಧಾನಕ್ಕೆ ಹಾಗೂ ಡಾ.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ಅದನ್ನು ಯಾವ ರೀತಿ ಅನುಸರಿಸಬೇಕು ಎಂದು ದಲಿತ ಹೋರಾಟಗಾರ ಪ್ರೊ.ಕೃಷ್ಣಪ್ಪ ಅವರು ತಿಳಿಸಿಕೊಟ್ಟರು. ದಲಿತ ಮಹಿಳೆಯರ ಸ್ವಾಭಿಮಾನಕ್ಕೆ ಹೆಚ್ಚು ಗೌರವ ತಂದುಕೊಟ್ಟವರ ಪೈಕಿ ಮುಂಚೂಣಿಯಲ್ಲಿ ಪ್ರೊ.ಕೃಷ್ಣಪ್ಪ ಅವರಿದ್ದಾರೆ. ಬ್ರಿಟಿಷ್ ಅವರು ಒಡೆದು ಆಳುವ ದೊಡ್ಡ ಬಳುವಳಿ ಕೊಟ್ಟು ಹೋಗಿದ್ದಾರೆ. ರಾಜಕಾರಣಿಗಳು ಅದನ್ನು ಚೆನ್ನಾಗಿ ಅನುಸರಿಸುತ್ತಿದ್ದಾರೆ. ಜನಾಂಗ ಜನಾಂಗಗಳ ನಡುವೆ ಒಡೆದು ಆಳುವ ನೀತಿ ಅನುಸರಿಸಿ ಮತಪಡೆಯುತ್ತಾರೆ. ಅಂತಹ ಸಂವಿಧಾನ ವಿರೋಧಿಗಳಿಗೆ ಮಣೆಹಾಕಬೇಡಿ ಎಂದರು.
ಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸೀಮಿತವಾಗಿ ಸಂವಿಧಾನ ರಚಿಸಿಲ್ಲ. ಅಂಬೇಡ್ಕರ್ ಅವರ ಆಶಯಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತಿದ್ದೇವೆಯೇ ಎಂದು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜ್ಯದಲ್ಲಿನ ಎಲ್ಲ ಸರ್ಕಾರಗಳ ಅನುದಾನ ಮೀಸಲಾತಿಯಡಿಯಲ್ಲಿ ನೀಡುತ್ತಿದ್ದರೂ ಅರ್ಹರಿಗೆ ದೊರಕಿಸುವಲ್ಲಿ ಎಲ್ಲ ಪಕ್ಷಗಳ ಸರ್ಕಾರಗಳು ವಿಫಲವಾಗಿವೆ ಎಂದರು.
2018ರ ಚುನಾವಣೆ ವೇಳೆ ತಾಲೂಕು ಕಚೇರಿ ಆವರಣದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಿ ಕೊಡುವಂತೆ ಎಲ್ಲ ಮುಖಂಡರು ಬೇಡಿಕೆಯಿಟ್ಟಿದ್ದರು. ಆಗ ನಾನು ಅದಕ್ಕೆ ಒಪ್ಪಿಗೆ ಕೊಟ್ಟಿದ್ದೆ. ಆದರೆ ನಾನು ಶಾಸಕನಾದ ನಂತರ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾದಾಗ ಹಲವು ಕಾನೂನು ತೊಡಕುಗಳು ಬಂದವು. ಆಗ ನಾನು ಕೊಟ್ಟ ಮಾತು ಉಳಿಸಿಕೊಳ್ಳಲು ಆಗುತ್ತಿಲ್ಲವಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಾಗಿದ್ದೆ. ಆಗ ಎಚ್.ಡಿ.ದೇವೇಗೌಡರ ಸಲಹೆ ಹಾಗೂ ಸಹಕಾರದ ಮೇರೆಗೆ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಸೋಮನಹಳ್ಳಿ ಅಂದಾನಿ, ಕಂಚಿನಕೋಟೆ ಮೂರ್ತಿ, ಮುಳುಕಟ್ಟೆ ಶಿವರಾಮಯ್ಯ, ನಂಜುಂಡಯ್ಯ, ಕ್ಯಾತನಹಳ್ಳಿ ಮಂಜುನಾಥ್,ಮಹದೇವ್, ಶಿವಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಚನ್ನಪ್ಪ ಸೇರಿದಂತೆ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net