ಚಿರತೆ ದಾಳಿಗೆ ಕರು ಬಲಿ

ಬಾಣಗಳ್ಳಿ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಬೋನ್ ಇಟ್ಟಿರುವ ಅರಣ್ಯ ಇಲಾಖೆ.
ಬಾಣಗಳ್ಳಿ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಬೋನ್ ಇಟ್ಟಿರುವ ಅರಣ್ಯ ಇಲಾಖೆ.
Published on
ಹಲಗೂರು: ಸಮೀಪದ ಬಾಣಗಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಗೆ ಕರು ಬಲಿಯಾಗಿದೆ.
ಬಿ.ಎಸ್.ರಮೇಶ್ ಅವರು ತಮ್ಮ ತೋಟದ ಮನೆಯ ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಿದ್ದರು. ತಡರಾತ್ರಿ ಚಿರತೆ ದಾಳಿ ನಡೆಸಿ ಕರುವನ್ನು ಕೊಂದುಹಾಕಿದೆ. ನಾಯಿ ಹಾಗೂ ಹಸುಗಳು ಕಿರುಚಿದ್ದರಿಂದ ಮಾಲೀಕರು ಹೊರಗೆ ಬಂದಿದಾಗ ಚಿರತೆ ಕಾಣಿಸಿದೆ. ಈ ಬಗ್ಗೆ ಮಳವಳ್ಳಿ ಮತ್ತು ಹಲಗೂರು ಅರಣ್ಯ ಇಲಾಖೆಯ ಗಸ್ತು ಪಾಲಕ ಕೃಷ್ಣ ಅವರಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಪಶು ವೈದಾಧಿಕಾರಿ ಪ್ರವೀಣ್ ಕರುವಿನ ಶವಪರೀಕ್ಷೆ ನಡೆಸಿದ್ದಾರೆ.
ಚಿರತೆ ಸೆರೆಗೆ ಈಗಾಗಲೇ ಬೆಳ್ತೂರು ಗ್ರಾಮದಲ್ಲಿ ಇಟ್ಟಿದ್ದ ಬೋನನ್ನು ಬಿ.ಎಸ್.ರಮೇಶ್ ಅವರ ಜಮೀನಿನಲ್ಲಿ ಅಳವಡಿಸಲಾಗಿದೆ. ಚಿರತೆ ದಾಳಿಯಿಂದ ರೈತನಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸುವುದಾಗಿ ಅರಣ್ಯ ಇಲಾಖೆಯ ಕೃಷ್ಣ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net