ಕೊಳ್ಳೇಗಾಲ ತಾಲೂಕಿನ ಬನ್ನೇಹಳ್ಳಿ ಗ್ರಾಮದ ಮಾದೇಶ(36) ಮೃತರು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ಕಾರ್ಯನಿಮಿತ್ತ ಸ್ವಗ್ರಾಮಕ್ಕೆ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದರು. ಬೋಸೆಗೌಡನ ದೊಡ್ಡಿ ಬಳಿ ಮುಂದೆ ಸಾಗುತ್ತಿದ್ದ ಕ್ರೇನ್ ಅನ್ನು ಹಿಂದಿಕ್ಕಲು ಯತ್ನಿಸಿದ ವೇಳೆ ಕ್ರೇನ್‌ನ ಮುಂಭಾಗ ಬೈಕ್ ತಗುಲಿದೆ. ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಸಮೇತ ಸವಾರ ಕ್ರೇನ್ ಕೆಳಗೆ ಸಿಲುಕಿಕೊಂಡಿದ್ದು, ಹೆಲ್ಮೆಟ್ ಧರಿಸಿದ್ದರೂ ಕ್ರೇನ್ ಚಕ್ರ ತಲೆಯ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮಾದೇಶ ಸಾವಿಗೀಡಾಗಿದ್ದಾನೆ.