ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ರಾಮಲಿಂಗೇಗೌಡರ ಪುತ್ರ ಕೆ.ಆರ್.ಮಂಜುನಾಥ್(28) ಮೃತರು. ಇವರು ಬುಧವಾರ ತಮ್ಮ ಬೈಕ್‌ನಲ್ಲಿ ಕೊಡಿಯಾಲ ಗ್ರಾಮ ಕಡೆಯಿಂದ ಕಾಳೇನಹಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಹುಣಸನಹಳ್ಳಿ ಗ್ರಾಮ ಸಮೀಪದ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆೆ.