ಸಂತೆಬಾಚಹಳ್ಳಿ ಹೋಬಳಿಯ ಬೆಡದಹಳ್ಳಿ ಗ್ರಾಮದ ಬಿ.ಕೆ.ರೇವಣ್ಣ(55) ಮೃತರು. ಇವರ ಮಗಳಾದ ದಾಕ್ಷಾಯಿಣಿ ಅವರನ್ನು ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ಕೇಶವಮೂರ್ತಿಗೆ ವಿವಾಹ ಮಾಡಿಕೊಡಲಾಗಿತ್ತು. ಅಳಿಯ ಕೇಶವಮೂರ್ತಿ ತಾಯಿ ಮಂಜಮ್ಮ ಇತ್ತೀಚೆಗೆ ಮೃತರಾಗಿದ್ದರು. ಇವರ ತಿಥಿ ಕಾರ್ಯದ ಪೂರ್ವ ಸಿದ್ಧತೆಗಾಗಿ ಬೆಡದಹಳ್ಳಿ ಗ್ರಾಮದಿಂದ ಚೌಡೇನಹಳ್ಳಿ ಗ್ರಾಮಕ್ಕೆ ಬುಧವಾರ ಬೆಳಗ್ಗೆ ಬೈಕ್‌ನಲ್ಲಿ ತೆರಳಿದ್ದರು. ಅಲ್ಲಿಂದ ಕಾರ್ಯಕ್ಕೆ ಪದಾರ್ಥಗಳನ್ನು ತರಲು ಕಿಕ್ಕೇರಿಗೆ ಬೈಕ್‌ನಲ್ಲಿ ಬರುತ್ತಿದ್ದರು.