

ಪ್ರಮುಖ ಮುಖ್ಯಾಂಶಗಳು
ಮೇಲುಕೋಟೆ:
ಬಳಘಟ್ಟ ಏತ ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಈಗಿನ ಶಾಸಕರು ಬಹುತೇಕ ಅಮೆರಿಕಾದಲ್ಲಿರುತ್ತಾರೆ. ವಿಸಿಟಿಂಗ್ ಕಾರ್ಡ್ ಇಟ್ಟುಕೊಳ್ಳುವ ರೀತಿ ಕ್ಷೇತ್ರಕ್ಕೆ ವಿಸಿಟ್ ಗೆಸ್ಟ್ ಮಾದರಿಯಲ್ಲಿ ಬರುತ್ತಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಇದ್ದಾರೋ ಇಲ್ಲವೋ ಎಂಬುದೇ ತಿಳಿಯುವುದಿಲ್ಲ. ಎಲ್ಲ ಕಡೆ ಹಸಿರು ಶಾಲು ಹಾಕಿಕೊಂಡು ಓಡಾಡುತ್ತಾರೆ. ಆದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಬಗ್ಗೆ ಮಾಹಿತಿಯಿಲ್ಲ ಎಂದು ಹಸರೇಳದೆ ದರ್ಶನ್ ಪುಟ್ಟಣ್ಣಯ್ಯಗೆ ಟಾಂಗ್ ನೀಡಿದರು. ಇಂತಹ ಪರಿಸ್ಥಿತಿ ತಪ್ಪಿಸಲು ಚುನಾವಣೆಗಳಲ್ಲಿ ಸಂಕಷ್ಟಕ್ಕೆ ಪ್ರತಿದಿನ ಸ್ಪಂದಿಸುವ ಪುಟ್ಟರಾಜು ಬೆಂಬಲಿಸಿ ಎಂದರು.