ತಡಗವಾಡಿಯಲ್ಲಿ ಬಾಬಯ್ಯನ ಉತ್ಸವ

ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಗುರುವಾರ ತ್ಯಾಗ ಮತ್ತು ಬಲಿದಾನ ಸಂಕೇತದ ಮೊಹರಂ ಪ್ರಯುಕ್ತ ನಡೆದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬಾಬಯ್ಯನ ಉತ್ಸವ ಸಂಭ್ರಮ ಸಡಗರದಿಂದ ನೆರವೇರಿದ್ದು, ಕಿಂದರಿ ಟೋಪಿ ಧರಿಸಿದ್ದ ಫಕೀರರು ದೇವರ ಆಚರಣೆಯಲ್ಲಿ ಕೊಂಡದ ಸುತ್ತ ಕುಣಿದು ಸಂಭ್ರಮಿಸಿದರು.
ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಗುರುವಾರ ತ್ಯಾಗ ಮತ್ತು ಬಲಿದಾನ ಸಂಕೇತದ ಮೊಹರಂ ಪ್ರಯುಕ್ತ ನಡೆದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬಾಬಯ್ಯನ ಉತ್ಸವ ಸಂಭ್ರಮ ಸಡಗರದಿಂದ ನೆರವೇರಿದ್ದು, ಕಿಂದರಿ ಟೋಪಿ ಧರಿಸಿದ್ದ ಫಕೀರರು ದೇವರ ಆಚರಣೆಯಲ್ಲಿ ಕೊಂಡದ ಸುತ್ತ ಕುಣಿದು ಸಂಭ್ರಮಿಸಿದರು.
Published on
ಶ್ರೀರಂಗಪಟ್ಟಣ: ತಾಲೂಕಿನ ತಡಗವಾಡಿ ಗ್ರಾಮದಲ್ಲಿ ತ್ಯಾಗ-ಬಲಿದಾನದ ಸಂಕೇತವಾದ ಮೊಹರಂ ಹಬ್ಬದ ಪ್ರಯುಕ್ತ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬಾಬಯ್ಯನ ಉತ್ಸವನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು.
ಗ್ರಾಮದ ರಂಗದಲ್ಲಿರುವ ಬಾಬಯ್ಯನ ಗುಡಿಯಲ್ಲಿ ಪ್ರವಾದಿ ಮೊಹಮದ್ ಅವರ ಮೊಮ್ಮಕ್ಕಳಾದ ಅಸೇನ್ ಮತ್ತು ಹುಸೇನ್ ಅವರೊಂದಿಗೆ ಬಾಬಯ್ಯನ ಹಸ್ತಗಳನ್ನು ಪ್ರತಿಷ್ಠಾಪಿಸಿ ಹಿಂದು ಮತ್ತು ಮುಸ್ಲಿಂನ ಮೂವರು ದೇವತೆಗಳಿಗೂ 200ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆದುಬಂದ ಸಂಪ್ರದಾಯ.
ಬಳಿಕ ದೇವಾಲಯದ ಹೊರಗೆ ಗ್ರಾಮದ ಸಾಕಷ್ಟು ಪುರುಷರು ಮೈತುಂಬಾ ಕಪ್ಪು ಮಸಿಬಳಿದುಕೊಂಡು ಫಕೀರರ ವೇಷತೊಟ್ಟು ಕಿಂದರಿ ಟೋಪಿ ಧರಿಸಿ ಕುಣಿದುಕೊಂಡು ತಡಗವಾಡಿ ಮತ್ತು ಗರ್ಕಹಳ್ಳಿ ಗ್ರಾಮಗಳ ಸುತ್ತಿ ಜನರಿಂದ ಧನ ಸಂಗ್ರಹದೊಂದಿಗೆ ಸೌದೆ ತಂದು ಕೊಂಡ ಹೊತ್ತಿಸಿದರು. ಎರಡು ಗ್ರಾಮಗಳ ಗ್ರಾಮಸ್ಥರ ಎಲ್ಲರ ಮನೆಯ ಮುಂಭಾಲಿಗೆ ದೇವರ ಉತ್ಸವ ರಾತ್ರಿಯಿಂದ ಮುಂಜಾನೆವರೆಗೂ ಮೆರವಣಿಗೆ ಸಾಗಿತು.
ಬಳಿಕ ಶುಕ್ರವಾರ ಮುಂಜಾನೆ ದೇವಾಲಯ ಮುಂಭಾಗದಲ್ಲಿ ಬೃಹತ್ ಸೌದೆಗಳಿಂದ ಹೊತ್ತಿ ಉರಿದು ಬೆಂದಿದ್ದ ಕೊಂಡದ ಸುತ್ತಲು ಖವ್ವಾಲಿ ಹಾಡುತ ಫಕೀರರು ಕುಣಿದು ಕುಪ್ಪಳಿಸಿದ್ದು, ಗ್ರಾಮ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಸಹಸ್ರಾರು ಜನರ ಸಮ್ಮುಖದಲ್ಲಿ ಕತ್ತಿ ಹಿಡಿದ ಗುಡ್ಡಪ್ಪಂದಿರು ಕೆಂಡದ ಕೊಂಡ ಹಾಯ್ದ ದೇವರ ಪ್ರಾರ್ಥನೆ ಸಲ್ಲಿಸಿದರು.
ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಬೆಂಗಳೂರು, ಶ್ರೀರಂಗಪಟ್ಟಣ ಸೇರಿದಂತೆ ಸಾಕಷ್ಟು ಕಡೆಗಳಿಂದ ಮುಸ್ಲಿಂ ಸಮುದಾಯದವರು ಆಗಮಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net