ಶಿವನಸಮುದ್ರದಿಂದ ಮದ್ದೂರು ರಾಮ್ ರಹೀಮ್ ನಗರ ಬಡಾವಣೆ ಕಸಾಯಿ ಖಾನೆಗೆ ಟೆಂಪೋದಲ್ಲಿ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಹಿಂದೂಪರ ಸಂಘಟನೆಯ ಸಚಿನ್, ಕದಲೂರು ನವೀನ, ಯೋಗಾನಂದ, ವೀರಭದ್ರಸ್ವಾಮಿ ಸೇರಿದಂತೆ ಹಲವು ಕಾರ್ಯಕರ್ತರು ಹಳೆ ಎಂಸಿ ರಸ್ತೆಯ ಕೆನರಾ ಬ್ಯಾಂಕಿನ ಬಳಿ ದಾಳಿ ನಡೆಸಿ ಗೋ ರಕ್ಷಣೆ ಮಾಡಿದ್ದಾರೆ. ಪೊಲೀಸರ ವಶಕ್ಕೆ ಪಡೆದ ಗೋವನ್ನು ಮೈಸೂರಿನ ಪಿಂಜರಾ ಪೋಲ್‌ಗೆ ಸುರಕ್ಷಿತವಾಗಿ ರವಾನಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.