ಅರಳಕುಪ್ಪೆ ಮೋಹನ್ ಅವಿರೋಧವಾಗಿ ಆಯ್ಕೆ

ಭೂ ಅಭಿವೃದ್ಧಿ ಸಹಕಾರ ಗ್ರಾಮೀಣ (ಪಿ.ಎಲ್.ಡಿ) ಬ್ಯಾಂಕ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಅವರನ್ನು ಅಭಿಮಾನಿಗಳು ಅಭಿನಂದಿಸಿದರು.
ಭೂ ಅಭಿವೃದ್ಧಿ ಸಹಕಾರ ಗ್ರಾಮೀಣ (ಪಿ.ಎಲ್.ಡಿ) ಬ್ಯಾಂಕ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಅವರನ್ನು ಅಭಿಮಾನಿಗಳು ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಕೆ.ಆರ್.ಪೇಟೆ :  ಭೂ ಅಭಿವೃದ್ಧಿ ಸಹಕಾರ ಗ್ರಾಮೀಣ (ಪಿಎಲ್‌ಡಿ) ಬ್ಯಾಂಕ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಅರಳಕುಪ್ಪೆ ಮೋಹನ್ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷರಾಗಿದ್ದ ಕಬ್ಬಲಗೆರೆ ಪುಟ್ಟಸ್ವಾಮಿಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿದ್ದರಿಂದ ಅದ್ಯಕ್ಷ ಸ್ಥಾನ ಬಯಸಿ ಎ.ಸಿ. ಮೋಹನ್ ಅರಳಕುಪ್ಪೆ ಅವರನ್ನು ಬಿಟ್ಟರೆ ಉಳಿದ ಯಾವ ಸದಸ್ಯರು ಉಮೇದುವಾರಿಕೆ ಸಲ್ಲಿಸದ ಕಾರಣ ಮೋಹನ್ ಬ್ಯಾಂಕ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಆನಂದ್ ಘೋಷಿಸಿದರು.
ನೂತನ ಅಧ್ಯಕ್ಷರು ಆಯ್ಕೆಯಾಗುತ್ತಿದ್ದಂತೆ ಬ್ಯಾಂಕಿನ ನಿರ್ದೇಶಕರು ಮುಖಂಡರು,ಅಭಿಮಾನಿಗಳು, ಹಿತೈಷಿಗಳು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡುವ ಮೂಲಕ ಅಭಿನಂದಿಸಿದರು.
ಪಿ.ಎಲ್.ಡಿ ಉಪಾಧ್ಯಕ್ಷ ಮಾರ್ಗೋನಹಳ್ಳಿ ರಮೇಶ್, ಬ್ಯಾಂಕ್ ಮಾಜಿ  ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ನಿರ್ದೇಶಕರಾದ ಭಾರತಿಪುರ ಸುರೇಶ್, ಅಣ್ಣೆಚಾಕನಹಳ್ಳಿ ನಾಗರಾಜೇಗೌಡ, ರಾಜನಾಯಕ, ಮಾಳಗೂರು ಜಗದೀಶ್,ಬಣ್ಣೇನಹಳ್ಳಿ ಧನಂಜಯ,ಲಕ್ಷ್ಮೀಫುರ ಚಂದ್ರೇಗೌಡ,ಬಂಡಿಹೊಳೆ ನಾಗೇಶ್,ಶೀಳನೆರೆ ರಾಮೇಗೌಡ, ಮಂಜುಳಾ ಕೃಷ್ಣಗೌಡ,ಕವಿತ ಚಂದ್ರೇಗೌಡ, ಕೆ.ಟಿ.ಚಕ್ರಪಾಣಿ, ಅರೆನೊಪ್ಪನಹಳ್ಳಿ ಸುನಿಲ್, ಭಾರತೀಪುರ ಸುರೇಶ್, ಮುಖಂಡರಾದ ಸೋಮೇಗೌಡ, ರಾಜೇಶ್, ಸೇರಿದಂತೆ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net