ಜ್ಞಾನದ ಜಗತ್ತು ಪರಿಚಯಿಸುವ ಅಕ್ಷರಾಭ್ಯಾಸ

ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯ ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೂಪಾ ದೇವರಾಜು, ಸುಬ್ರಹ್ಮಣ್ಯ, ರಶ್ಮಿತಾ, ವಿನೋದ್, ಶ್ರುತಿ, ಜಯವಾಣಿ, ನಿಶ್ಚಿತಾ, ರಂಜಿತಾ , ರಂಗನಾಥ್, ಮಮತಾ, ಕಾವ್ಯಾ, ನಾಗರತ್ನಾ ಇದ್ದರು.
ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯ ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೂಪಾ ದೇವರಾಜು, ಸುಬ್ರಹ್ಮಣ್ಯ, ರಶ್ಮಿತಾ, ವಿನೋದ್, ಶ್ರುತಿ, ಜಯವಾಣಿ, ನಿಶ್ಚಿತಾ, ರಂಜಿತಾ , ರಂಗನಾಥ್, ಮಮತಾ, ಕಾವ್ಯಾ, ನಾಗರತ್ನಾ ಇದ್ದರು.
Published on
ಮದ್ದೂರು: ಅಕ್ಷರಾಭ್ಯಾಸ ಎಂದರೆ ಮಗುವಿಗೆ ಔಪಚಾರಿಕ ಶಿಕ್ಷಣ ಮತ್ತು ಜ್ಞಾನದ ಜಗತ್ತನ್ನು ಪರಿಚಯಿಸುವ ಪವಿತ್ರ ಹಿಂದೂ ಸಂಪ್ರದಾಯವಾಗಿದೆ ಎಂದು ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಹೆಮ್ಮನಹಳ್ಳಿಯ ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲರ ಮನೆಯಲ್ಲೂ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಪದ್ಧತಿ ಬೆಳೆಸಿಕೊಂಡರೆ ಆ ಮಕ್ಕಳು ವಿದ್ಯಾ ಪಾರಂಗತರಾಗುವುದರಲ್ಲಿ ಸಂಶಯವೇ ಇಲ್ಲ ಎಂದರು.
ಅಕ್ಷರಾಭ್ಯಾಸದಿಂದ ಮಗುವಿಗೆ ಜ್ಞಾನದ ದೇವತೆಯಾದ ಸರಸ್ವತಿ ಮತ್ತು ಗಣಪತಿಯ ಆಶೀರ್ವಾದ ಸಿಗುತ್ತದೆ. ಮಗುವಿಗೆ 2ರಿಂದ 5 ವರ್ಷ ತುಂಬಿದ ನಂತರ ಇದನ್ನು ಮಾಡಿಸುವುದು ವಾಡಿಕೆಯಾಗಿದೆ. ಇದರಿಂದ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷೆ ರೂಪಾ ದೇವರಾಜು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ನೀಡುವ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಪರಿಸರ ದಿನಾಚರಣೆ, ಯೋಗಾಭ್ಯಾಸ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪ್ರೇರಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪ್ರಪಂಚದಲ್ಲಿ ವಿದ್ಯೆಗೆ ಮಹತ್ತರವಾದ ಸ್ಥಾನವಿದ್ದು, ಇದನ್ನರಿತು ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಗಳಿಸಿ ಪಾಲಕರಿಗೆ, ಶಿಕ್ಷಕರಿಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸುಮಾರು 50 ಪಾಲಕರು, ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷೆ ರೂಪಾ ದೇವರಾಜು, ಮುಖ್ಯಶಿಕ್ಷಕ ಸುಬ್ರಹ್ಮಣ್ಯ, ಶಿಕ್ಷಕರಾದ ರಶ್ಮಿತಾ, ವಿನೋದ್, ಶ್ರುತಿ, ಜಯವಾಣಿ, ನಿಶ್ಚಿತಾ, ರಂಜಿತಾ, ರಂಗನಾಥ್, ಮಮತಾ, ಕಾವ್ಯಾ, ನಾಗರತ್ನಾ, ಪ್ರೀತಿ, ಶಾಲಾ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net