ನೌಕರರಿಲ್ಲದೆ ಭಣಗುಡುತ್ತಿದೆ ಎಡಿಎಲ್ಆರ್ ಕಚೇರಿ

ಶ್ರೀರಂಗಪಟ್ಟಣದ ಎಡಿಎಲ್ಆರ್ ಕಚೇರಿಯಲ್ಲಿ ನೌಕರರಿಲ್ಲದೆ ಕುರ್ಚಿಗಳು ಖಾಲಿಯಾಗಿರುವುದು.
ಶ್ರೀರಂಗಪಟ್ಟಣದ ಎಡಿಎಲ್ಆರ್ ಕಚೇರಿಯಲ್ಲಿ ನೌಕರರಿಲ್ಲದೆ ಕುರ್ಚಿಗಳು ಖಾಲಿಯಾಗಿರುವುದು.
Published on
ಶ್ರೀರಂಗಪಟ್ಟಣ: ಎಡಿಎಲ್ಆರ್ ಇಲಾಖೆಯಲ್ಲಿನ ಭೂಅಕ್ರಮಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಖಾಸಗಿ ವಕ್ತಿ ಸೇರಿ 9 ಸರ್ಕಾರಿ ನೌಕರರ ಬಂಧನವಾದ ಬೆನ್ನಲ್ಲೇ ಎಡಿಎಲ್ಆರ್ ಕಚೇರಿ ಭಣಗುಡುತ್ತಿವೆ.
ತಾಲೂಕಿನ ಮಹದೇವಪುರ ಸರ್ವೇ ನಂ.411ರಲ್ಲಿನ 200 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಮಾಡಿಕೊಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಖಾಸಗಿ ನೌಕರನ ಪತ್ತೆ, ಅಧಿಕಾರಿಗಳ ಸರ್ಕಾರಿ ಕೆಲಸ ದುರುಪಯೋಗ, ಭ್ರಷ್ಟಾಚಾರ ಹಾಗೂ ಕಳ್ಳಾಟ ಪತ್ತೆಯಾಗಿತ್ತು. ಅಲ್ಲದೆ ಈ ಸಂಬಂಧ ಒಂಬತ್ತು ಜನರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.
ಘಟನೆ ಬಳಿಕ ಅಧಿಕಾರಿಗಳು ಹಾಗೂ ನೌಕರರಿದ್ದ ಸ್ಥಾನಗಳಲ್ಲಿ ಯಾರೂ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಖಾಲಿ ಕುರ್ಚಿಗಳಿರುವ ಕಾರಣ ಆಕಾರ್‌ಬಂಧು, ಟಿಪ್ಪಣಿ, ಪೋಡಿಗಳು, ಹದ್ದುಬಸ್ತು, ಸಶ್ಮಾನ, ರೈತರ ಜಮೀನು ಮತ್ತು ಸರ್ಕಾರಿ ನಿವೇಶನಗಳ ಅಳತೆ, ತತ್ಕಾಲ್ ಪೋಡಿ, ದರ್ಖಾಸ್ತು ರಿಜಿಸ್ಟಾರ್ ಆಗಿ ಬಂದ ಆಸ್ತಿಗಳ ಐಎಂಪಿ, ತಾಲೂಕು ಕಚೇರಿಯ ವಿವಿಧ ಕೆಲಸಗಳು ನಡೆಯದ ಕಾರಣ 1ಸಾವಿರಕ್ಕೂ ಕಡತಗಳು ಬಾಕಿ ಉಳಿದಿವೆ.
ಕ್ಷೇತ್ರದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದವರು ಎಡಿಎಲ್ಆರ್ ಕಚೇರಿಯೊಳಗಿನ ಖಾಲಿ ಕುರ್ಚಿಗಳೆದುರು ತಮ್ಮ ಗೋಳು ತೋಡಿಕೊಳ್ಳುವಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net