ಕೋಣಸಾಲೆ ಗ್ರಾಮದ ಯುವಕ ಆತ್ಮಹತ್ಯೆ

 ಆತ್ಮಹತ್ಯೆ
ಆತ್ಮಹತ್ಯೆ
Published on
ಮದ್ದೂರು: ತಾಲೂಕಿನ ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣಸಾಲೆ ಗ್ರಾಮದಲ್ಲಿ ಶನಿವಾರ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋಣಸಾಲೆ ಗ್ರಾಮದ ಅಭಿಷೇಕ್ (31) ಆತ್ಮಹತ್ಯೆ ಮಾಡಿಕೊಂಡವರು. ಮೃತ ಅಭಿಷೇಕ್ ಎಳನೀರು ಕೀಳುವ ಕೆಲಸ ಮಾಡುತ್ತಿದ್ದ. ಸಾಲ ಮಾಡಿಕೊಂಡಿದ್ದರಿಂದ ಶನಿವಾರ ಅಭಿಷೇಕ್ ಮನನೊಂದು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ನಾರಾಯಣಿ ಹಾಗೂ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮೃತನ ಅಜ್ಜಿ ನೀಡಿದ ದೂರಿನ ಮೇರೆಗೆ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net