ಗುಣಮಟ್ಟದ ಕಾಮಾಗಾರಿಗೆ ತಾಕೀತು

ಮದ್ದೂರಿನಲ್ಲಿ ನಡೆಯುತ್ತಿರುವ ಗೊರವನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಕೆ.ಎಂ.ಉದಯ್ ಪರಿಶೀಲನೆ ಮಾಡಿದರು. ಶಿವರಾಮು, ಪ್ರದೀಪ್, ಎಂ.ಬಿ.ಸಚಿನ್, ರಾಧಿಕಾ, ನಾಗರಾಜು, ಹನುಮಂತು ಇದ್ದರು.
ಮದ್ದೂರಿನಲ್ಲಿ ನಡೆಯುತ್ತಿರುವ ಗೊರವನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಕೆ.ಎಂ.ಉದಯ್ ಪರಿಶೀಲನೆ ಮಾಡಿದರು. ಶಿವರಾಮು, ಪ್ರದೀಪ್, ಎಂ.ಬಿ.ಸಚಿನ್, ರಾಧಿಕಾ, ನಾಗರಾಜು, ಹನುಮಂತು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಅಭಿವೃದ್ಧಿ ಪರಿಶೀಲಿಸಿದ ಶಾಸಕ ಕೆ.ಎಂ.ಉದಯ್
ಮದ್ದೂರು: ನಗರದ ಹಳೇ ಗೊರವನಹಳ್ಳಿ ರಸ್ತೆಯು ಮುಖ್ಯ ರಸ್ತೆಗಳಲ್ಲಿ ಒಂದಾಗಿದ್ದು,ಈಗ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯು ಉತ್ತಮ ಗುಣಮಟ್ಟವನ್ನು ಹೊಂದಿರಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಂ.ಉದಯ್ ತಾಕೀತು ಮಾಡಿದರು.
ಸುಮಾರು 2 ತಿಂಗಳಿಂದ ನಡೆಯುತ್ತಿರುವ ಗೊರವನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆ ಶನಿವಾಶನಿವಾರಸಿ ಅವರು ಮಾತನಾಡಿದರು.
ಸುಮಾರು ಎರಡು ದಶಕಗಳಿಂದ ಈ ರಸ್ತೆಯ ಅಭಿವೃದ್ಧಿಯೇ ಆಗಿರಲಿಲ್ಲವೆಂದ ಅವರು, ಪುರಸಭೆಯಾಗಿದ್ದ ಮದ್ದೂರು ಇತ್ತೀಚೆಗೆ ಹೊಸದಾಗಿ ನಗರಸಭೆಯಾಗಿದ್ದು, ನಗರಕ್ಕೆ ಅನುಗುಣವಾಗಿ ರಸ್ತೆಗಳು ಇರಬೇಕು ಎನ್ನುವ ನಿಟ್ಟಿನಲ್ಲಿ ನಗರಸಭೆಗೆ ಸೇರ್ಪಡೆಯಾಗಿರುವ ಗೊರವನಹಳ್ಳಿಯನ್ನು ಸಂಪರ್ಕಿಸುವರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಈ ರಸ್ತೆಯಲ್ಲಿ ಬರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಸೇರಿದಂತೆ ರಸ್ತೆಯಲ್ಲೇ ಇರುವ ಕೆಲವು ಮರಗಳ ತೆರವು, ರಸ್ತೆಯ ಮಧ್ಯೆ ಬರುವ ಕೆಲವು ಡೆಕ್‌ಗಳ ಕೆಲಸಗಳು ಬಾಕಿ ಇವೆ. ಇನ್ನುಳಿದಂತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಅಷ್ಟೇ ಅಲ್ಲದೇ ಹೈಸ್ಕೂಲ್ ವೃತ್ತದ ಬಳಿ ರಸ್ತೆಗೇ ಕೆಲವು ಅಂಗಡಿಗಳು ಇರುವುದರಿಂದ ಸರ್ವೇ ನಡೆಸಿ ಅಲ್ಲಿಯೂ ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಯಲಿದೆ ಎಂದರು.
ನಂತರ ನಗರದ ವಿವಿಧ ಬಡಾವಣೆಗಳಲ್ಲಿ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ, ಚರಂಡಿ ನಿರ್ಮಾಣ, ಒಳಚರಂಡಿ ವ್ಯವಸ್ಥೆಯ ಸುಧಾರಣೆ ಹಾಗೂ ಮ್ಯಾನ್‌ಹೋಲ್‌ಗಳ ನಿರ್ಮಾಣ ಮತ್ತು ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಗೆ ಉತ್ತಮ ರಸ್ತೆ ಸಂಪರ್ಕ, ಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ಮೂಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳುವಂತೆ ಹಾಗೂ ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಅಭಿವೃದ್ಧಿ, ಸ್ವಚ್ಛತೆ ಹಾಗೂ ನಾಗರಿಕರ ಸುರಕ್ಷತೆ ಮತ್ತು ಅನುಕೂಲ ಗಮನದಲ್ಲಿಟ್ಟುಕೊಂಡು ಪ್ರತಿ ಕಾಮಗಾರಿಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ನಮ್ಮ ಬದ್ಧತೆಯಾಗಿದೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಿ, ಮದ್ದೂರನ್ನು ಮತ್ತಷ್ಟು ಸುಂದರ ಹಾಗೂ ಸುಸಜ್ಜಿತ ಪಟ್ಟಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಮುಖಂಡರಾದ ಶಿವರಾಮು, ಬೋರ್ವೆಲ್ ಪ್ರದೀಪ್, ಸಾಲರ್, ಪುರಸಭಾ ಮಾಜಿ ಸದಸ್ಯ ಎಂ.ಬಿ.ಸಚಿನ್, ನಗರಸಭಾ ಪೌರಾಯುಕ್ತೆ ರಾಧಿಕಾ, ನೀರಾವರಿ ಇಲಾಖೆಯ ಅಧಿಕಾರಿ ನಾಗರಾಜ್, ಪಿಡಬ್ಲ್ಯುಡಿ ಅಧಿಕಾರಿ ಹನುಮಂತು, ಒಳಚರಂಡಿ ಹಾಗೂ ಕುಡಿಯುವ ನೀರು ಮಂಡಳಿಯ ಅಧಿಕಾರಿ ನಡಾಫ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net