ಗ್ರಾಮ ದೇವತೆಪುರದ ನಿವಾಸಿ ಬಸವರಾಜ ಮೂರ್ತಿ ಮನೆಯ ಮುಂಭಾಗ ಹಸುಕರುಗಳನ್ನು ಕಟ್ಟಿದ್ದರು. ಶನಿವಾರ ಬೆಳಗಿನ ಜಾವ 4.40ಕ್ಕೆ ಚಿರತೆ ದಾಳಿ ನಡೆಸಿದೆ. ಹಸುವಿನ ಕರು ಮತ್ತು ಸಾಕು ನಾಯಿಯನ್ನು ತಿಂದು ಹೋಗಿದೆ. ಮನೆಯ ಮುಂದೆ ಇರುವ ಸಿಸಿಟಿವಿಯಲ್ಲಿ ಚಿರತೆ ದಾಳಿ ನಡೆಸಿರುವ ದೃಶ್ಯ ಸೆರೆಯಾಗಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.