ಉತ್ತಮ ಕಲಿಕೆಯಿಂದ ಭವಿಷ್ಯ ಉಜ್ವಲ

ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ನಿಲುವಾಗಿಲು ಗ್ರಾಮದ ಪ್ರಾಢಶಾಲೆಯಲ್ಲಿ ಸಕ್ಕರೆನಾಡು ಅಲಯನ್ಸ್ ಕ್ಲಬ್ ವತಿಯಿಂದ ನಡೆದ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ಗಳು ಹಾಗೂ ಪಠ್ಯ ಪರಿಕರಗಳನ್ನು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್‌ನ ಅಧ್ಯಕ್ಷ ಕೆ.ಟಿ.ಹನುಮಂತು ವಿತರಣೆ ಮಾಡಿದರು. ಕೆ.ಎಸ್.ಚಂದ್ರಶೇಖರ್, ನಿತಿನ್‌ಗೌಡ, ಸಿದ್ದರಾಜು, ಸುರೇಶ್, ರವೀಶ್, ಎಂ.ಪಿ.ಮಹೇಶ್ ಇದ್ದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ನಿಲುವಾಗಿಲು ಗ್ರಾಮದ ಪ್ರಾಢಶಾಲೆಯಲ್ಲಿ ಸಕ್ಕರೆನಾಡು ಅಲಯನ್ಸ್ ಕ್ಲಬ್ ವತಿಯಿಂದ ನಡೆದ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ಗಳು ಹಾಗೂ ಪಠ್ಯ ಪರಿಕರಗಳನ್ನು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್‌ನ ಅಧ್ಯಕ್ಷ ಕೆ.ಟಿ.ಹನುಮಂತು ವಿತರಣೆ ಮಾಡಿದರು. ಕೆ.ಎಸ್.ಚಂದ್ರಶೇಖರ್, ನಿತಿನ್‌ಗೌಡ, ಸಿದ್ದರಾಜು, ಸುರೇಶ್, ರವೀಶ್, ಎಂ.ಪಿ.ಮಹೇಶ್ ಇದ್ದರು.
Published on
ಮದ್ದೂರು: ಉತ್ತಮ ಕಲಿಕೆಯಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬುವುದನ್ನರಿತು ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಕೊಪ್ಪ ಹೋಬಳಿಯ ನಿಲುವಾಗಿಲು ಗ್ರಾಮದ ಪ್ರಾಢಶಾಲೆಯಲ್ಲಿ ಶನಿವಾರ ಪರಿಸರ ದಿನಾಚರಣೆ ಅಂಗವಾಗಿ ಸಕ್ಕರೆನಾಡು ಅಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಗಿಡ ನೆಡುವ ಸಸ್ಯೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ಗಳು ಹಾಗೂ ಪಠ್ಯ ಪರಿಕರಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಿಕೆಯ ವೇಳೆ ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನು ಓದಬೇಕು, ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಪ್ರಪಂಚದಲ್ಲಿ ವಿದ್ಯೆಗೆ ಮಿಗಿಲಾದದ್ದು ಯಾವುದೂ ಇಲ್ಲ. ಉತ್ತಮ ವಿದ್ಯಾಭ್ಯಾಸ ಪಡೆದು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಪಾಲಕರಿಗೆ, ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಜನಸಂಖ್ಯಾ ಸ್ಫೋಟದಿಂದಾಗಿ ಅರಣ್ಯ ಕಡಿಮೆಯಾಗುತ್ತಿದೆ ಇದರಿಂದಾಗಿ ಮಳೆ ಬೆಳೆ ಕಡಿಮೆಯಾಗುವುದರ ಜತೆಗೆ ಪರಿಸರದ ಮೇಲೆ ಮಾರಕ ಪರಿಣಾಮಗಳು ಉಂಟಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದಂದು ಗಿಡಗಳನ್ನು ನೆಡಬೇಕು, ಪೋಷಣೆ ಮಾಡಬೇಕು. ಆ ಮೂಲಕ ಪರಿಸರ ಕಾಳಜಿ ಮೆರೆಯಬೇಕು ಎಂದು ಸಲಹೆ ನೀಡಿದರು.
ಹವಾಮಾನದಲ್ಲಿ ಏರುಪೇರು ಆದಾಗ ಜಾಗತಿಕ ತಾಪಮಾನ ಹೆಚ್ಚಾಗುತ್ತದೆ ಇದರಿಂದ ನೈಸರ್ಗಿಕ ಅಸಮತೋಲನ ಉಂಟಾಗುವುದರಿಂದ ಪ್ರತಿಯೊಬ್ಬರೂ ಕಾಡಿನ ಮಹತ್ವವನ್ನು ಅರಿತು ಗಿಡಗಳನ್ನು ನೆಟ್ಟು, ಪ್ರೀತಿಸಿ ಆರೈಕೆ ಮಾಡಬೇಕು ಎಂದರು.
ಜಿಲ್ಲಾ ಅಲಯನ್ಸ್ ಕ್ಲಬ್ ನ ಒಂದನೇ ಗವರ್ನರ್ ಕೆ.ಎಸ್.ಚಂದ್ರಶೇಖರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ನೀಡುವ ಜತೆಗೆ ಎಲ್ಲ್ಲ ರೀತಿಯ ಸವಲತ್ತುಗಳನ್ನು ಸರ್ಕಾರ ನೀಡುತ್ತಿದೆ. ಇದರ ಜತೆಗೆ ಸಂಘ, ಸಂಸ್ಥೆಗಳು ಅಗತ್ಯ ಸಹಕಾರ ನೀಡುತ್ತಿರುವುದರಿಂದ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸು ಮೂಲಕ ಸರ್ಕಾರಿ ಶಾಲೆಗಳು ಉಳಿಸಲು ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ಮಾಡಬಾರದು ಬದಲಾಗಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಬಳಸುವುದರ ಮೂಲಕ ಪರಿಸರ ಪ್ರೇಮ ಮೆರೆಯಬೇಕು ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಕ್ಕರೆನಾಡು ಅಲಯನ್ಸ್ ಸಂಸ್ಥೆಯ ಅಧ್ಯಕ್ಷ ನಿತಿನ್ ಗೌಡ, ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷ ಸುರೇಶ್, ಮುಖ್ಯ ಶಿಕ್ಷಕ ರವೀಶ್, ಶಿಕ್ಷಕರಾದ ಕನಕರತ್ನ, ಎಂ.ಪಿ.ಮಹೇಶ್, ಲಕ್ಷ್ಮೀಪತಿ, ಸುಕನ್ಯಾ, ಶೋಭಾ, ಶುಭಶ್ರೀ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net