ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ನೂರಾರು ಜನರಿಗೆ ಚಿಕನ್ ಗ್ರೇವಿ ಮತ್ತು ಗೀ ರೈಸ್ ವಿತರಿಸಲಾಯಿತು. ಸಿದ್ದೇಶ್, ಅನಿಜಿತ್, ನಂಜುಂಡಿ, ಶಿವಕುಮಾರ್, ಪ್ರಕಾಶ್, ವಿಕಾಶ್, ಪ್ರಸನ್ನ, ವೆಂಕಟೇಶ್, ಸುಖೇಶ್, ಕುಮಾರ್ ಇದ್ದರು.
ಮದ್ದೂರು:ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರವನ್ನು ಸ್ಥಾಪಿಸಿ, ಕೃಷಿ, ನೀರಾವರಿ, ಸಾಮಾಜಿಕ ಸುಧಾರಣೆ ಮತ್ತು ನಗರ ಯೋಜನೆಯಲ್ಲಿ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆಂದು ನಾಡಪ್ರಭು ಕೆಂಪೇಗೌಡ ಯವಕರ ಬಳಗದ ಅಧ್ಯಕ್ಷ ಸಿದ್ದೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮೀಪದ ನಗರಕೆರೆ ಗ್ರಾಮದ ಕೆಂಪೇಗೌಡ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌರ ಭಾವಚಿತ್ರಕ್ಕೆ ಪುಷ್ಪಾನಮನ ಸಲ್ಲಿಸಿ ಮಾತನಾಡಿದರು.
ಬೆಂಗಳೂರು ನಗರದಲ್ಲಿ ವಿವಿಧ ವೃತ್ತಿಪರರು ಮತ್ತು ಕುಶಲಕರ್ಮಿಗಳು ನೆಲೆಸಲು ಅನುಕೂಲವಾಗುವಂತೆ 64 ಪೇಟೆಗಳನ್ನು ನಿರ್ಮಿಸಿ ವ್ಯಾಪಾರಕ್ಕೆ ಉತ್ತೇಜನ ನೀಡಿದರು ಎಂದರು.
ಸಂಘದ ಉಪಾಧ್ಯಕ್ಷ ಅನಿಜಿತ್ ಮಾತನಾಡಿ, ಜಲ ಸಂರಕ್ಷಣೆಕೆರೆಗಳ ನಿರ್ಮಾಣಕ್ಕಾಗಿ ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗುವಂತೆ ಬೆಂಗಳೂರು ಸುತ್ತಮುತ್ತ ನೂರಾರು ಕೆರೆಗಳನ್ನು ನಿರ್ಮಿಸುವ ಜತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ದೇವಾಲಯಗಳನ್ನು ನಿರ್ಮಾಣ ಮಾಡಿದ ಧೀಮಂತ ವ್ಯಕ್ತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೆಂಪೇಗೌಡ ಜಯಂತಿ ಅಂಗವಾಗಿ ನೂರಾರು ಜನರಿಗೆ ಚಿಕನ್ ಗ್ರೇವಿ ಮತ್ತು ಗೀ ರೈಸ್ ಸಿಹಿ ವಿತರಣೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ಅನಿಜಿತ್, ಮುಖಂಡರಾದ ಶಿವಕುಮಾರ್, ಪ್ರಕಾಶ್, ವಿಕಾಶ್, ಪ್ರಸನ್ನ, ನಂಜುಂಡಿ, ವೆಂಕಟೇಶ್, ಸುಖೇಶ್, ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದು.