ಎನ್‌ಎಂಎಂಎಸ್ ತೇರ್ಗಡೆಯಾದ 40 ವಿದ್ಯಾರ್ಥಿಗಳು

ಪ್ರಸಕ್ತ ಸಾಲಿನ ರಾಷ್ಟ್ರೀಯ ಆದಾಯ ಪ್ರತಿಭಾ ಅಧಾರಿತ ವಿದ್ಯಾರ್ಥಿ ವೇತನ ಯೋಜನೆಗೆ ಆಯ್ಕೆಯಾಗಿರುವ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ 40 ವಿದ್ಯಾರ್ಥಿಗಳು.
ಪ್ರಸಕ್ತ ಸಾಲಿನ ರಾಷ್ಟ್ರೀಯ ಆದಾಯ ಪ್ರತಿಭಾ ಅಧಾರಿತ ವಿದ್ಯಾರ್ಥಿ ವೇತನ ಯೋಜನೆಗೆ ಆಯ್ಕೆಯಾಗಿರುವ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ 40 ವಿದ್ಯಾರ್ಥಿಗಳು.
Published on
ಹಲಗೂರು: ಕೇಂದ್ರ ಸರ್ಕಾರದ ನಡೆಸಿದ 2025-26 ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಆದಾಯ ಪ್ರತಿಭಾ ಅಧಾರಿತ ವಿದ್ಯಾರ್ಥಿ ವೇತನ ಯೋಜನೆ (ಎನ್‌ಎಂಎಂಎಸ್‌ಗೆ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ 40 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸುವ ನಿಟ್ಟಿನಲ್ಲಿ ಆರಂಭಿಸಿರುವ ಎನ್‌ಎಂಎಂಎಸ್ ಪರೀಕ್ಷೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿಯಾಗಿದೆ. ಕಳೆದ 5 ವರ್ಷಗಳಿಂದಲೂ ಕ್ರಮವಾಗಿ 62, 54, 42, 38, 40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ನಮ್ಮ ಶಾಲೆಯ ವಿದ್ಯಾರ್ಥಿಗಳು ನಿರಂತರವಾಗಿ ಉತ್ತಮ ಫಲಿತಾಂಶ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯಶಿಕ್ಷಕಿ ಶಕುಂತಲಾ ಹರ್ಷ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಆರು ತಿಂಗಳ ಅವಧಿಯಲ್ಲಿ ಶಾಲೆಯಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಜಿ-ಮ್ಯಾಟ್ ಮತ್ತು ಶಾಲಾ ಶಿಕ್ಷಕರಿಂದ ಸ್ಯಾಟ್ಸ್ ವಿಷಯಗಳ ಕುರಿತು ತರಬೇತಿ ನೀಡಲಾಗಿತ್ತು. ಈ ಬಾರಿ ಪರೀಕ್ಷೆ ಎದುರಿಸಿದ್ದ 8 ನೇ ತರಗತಿಯ 165 ವಿದ್ಯಾರ್ಥಿಗಳ ಪೈಕಿ 40 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಈ ವಿದ್ಯಾರ್ಥಿಗಳು ಮುಂದಿನ ನಾಲ್ಕು ವರ್ಷಗಳ ಕಾಲ ಪ್ರತಿ ತಿಂಗಳು 1 ಸಾವಿರ ರೂ. ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಶಿಕ್ಷಕರಾದ ನಿಂಗೇಗೌಡ, ಎಂ.ಕೆ.ಕೃಷ್ಣಸ್ವಾಮಿ, ಎಂ.ಸಿದ್ದರಾಜು, ಕೆ.ಎಂ.ಬಸವರಾಜು, ಡಿ.ಪಿ.ಮಹೇಶ್, ಎನ್.ಡಿ.ಹನುಮಯ್ಯ, ಮಲ್ಲಿಕಾರ್ಜುನ ಸ್ವಾಮಿ, ಎಸ್.ಡಿ.ಎಂ.ಸಿ ಸದಸ್ಯರಾದ ರವೀಶ್, ಪುಟ್ಟರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net