ಜೂಜುಕೋರರಿಂದ 30 ಸಾವಿರ ರೂ.ನಗದು ವಶ

16 ಜೂಜುಕೋರರ ಬಂದನ
16 ಜೂಜುಕೋರರ ಬಂದನ
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಕಡೆ ಜೂಜಾಟ
  • 16 ಜೂಜುಕೋರರನ್ನು ಬಂಧಿಸಿದ ಹಲಗೂರು ಪೊಲೀಸರು
ಹಲಗೂರು: ವಿವಿಧ ಕಡೆ ಜೂಜಾಟದಲ್ಲಿ ತೊಡಗಿದ್ದ 16 ಜೂಜುಕೋರರನ್ನು ಬಂಧಿಸಿದ ಹಲಗೂರು ಪೊಲೀಸರು, 30,000 ರೂ.ನಗದು ವಶಪಡಿಸಿಕೊಂಡಿದ್ದಾರೆ.
ಸಮೀಪದ ಚಿಕ್ಕ ಎಲಚಗೆರೆ ಗ್ರಾಮದ ಹೊರವಲಯದಲ್ಲಿ 9 ಜನರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 13 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಂತೆಯೇ ಸಮೀಪದ ಹುಚ್ಚೇಗೌಡನದೊಡ್ಡಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 7 ಜೂಜುಕೋರರನ್ನು ಬಂಧಿಸಿದ್ದು, 17,000 ರೂ.ನಗದು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ಖಚಿತ ಮಾಹಿತಿ ಅಧರಿಸಿ ಹಲಗೂರು ಪೊಲೀಸರು ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಶ್ರೀಧರ್ ಮತ್ತು ಪಿಎಸ್‌ಐ ಲೋಕೇಶ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ದಾಳಿ ಮಾಡಿದ್ದಾರೆ. ಎಸ್‌ಐ ಲೋಕೇಶ್ ಪ್ರಕರಣ ದಾಖಲಿಸಿಕೊಂಡಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net