ಮಂಡ್ಯದಲ್ಲಿ ದಳಪತಿಗೆ ಮತ್ತೊಂದು ಆಘಾತ! ಮಾಜಿ-ಹಾಲಿ ಶಾಸಕರು ಜೆಡಿಎಸ್​ ತೊರೆಯುತ್ತಾರಾ?

jds-congress
Published on

ಮಂಡ್ಯ: ಜೆಡಿಎಸ್​ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲೀಗ ದಳಪತಿಗೆ ಆಘಾತ ನೀಡುವ ಬೆಳವಣಿಗೆ ನಡೆಯವ ಕಾಲ ಸನಿಹದಲ್ಲಿದೆ ಎಂಬ ಚರ್ಚೆ ಶುರುವಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಜಿಲ್ಲೆಯಲ್ಲಿ ಜೆಡಿಎಸ್​ನ ಒಂದಿಬ್ರು ಮಾಜಿ-ಹಾಲಿ ಶಾಸಕರು ಕಾಂಗ್ರೆಸ್​ಗೆ ಸೇರುವ ಒಂದಿಬ್ರು ಕಾಂಗ್ರೆಸ್ ಸೇರ್ಪಡೆ ಆಗುವ ಬಗ್ಗೆ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಸುಳಿವು ಕೊಟ್ಟಿದ್ದು, ಆ ಮೂಲಕ ಪಕ್ಷದಲ್ಲಿ ತಳಮಳ ಹೆಚ್ಚಿಸಿದ್ದಾರೆ. ಇದನ್ನೂ ಓದಿರಿ  Video| ಬಿಜೆಪಿ ಮುಖಂಡನ ಬರ್ತ್ ​ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ

ಇನ್ನೊಂದು ವಾರದಲ್ಲಿ ಜೆಡಿಎಸ್​ ಮುಖಂಡ ಮಧುಬಂಗಾರಪ್ಪ ಅವರು ಕಾಂಗ್ರೆಸ್​ ಸೇರಲಿದ್ದಾರೆ ಎಂದು ನಿನ್ನೆಯಷ್ಟೇ(ಗುರುವಾರ) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದರು. ಇದನ್ನು ಪುಷ್ಟೀಕರಿಸುವಂತೆ ಡಿ.ಕೆ.ಶಿವಕುಮಾರ್​ ನಿವಾಸದಲ್ಲಿ ಮಧುಬಂಗಾರಪ್ಪ ನಿನ್ನೆ ಕೆಲ ಕಾಲ ಸಮಾಲೋಚನೆ ನಡೆಸಿದ್ದರು. ಇದಾದ ಮರುದಿನವೇ ಮಂಡ್ಯ ಜಿಲ್ಲೆಯಲ್ಲೂ ಜೆಡಿಎಸ್​ನ ಕೆಲ ನಾಯಕರು ಪಕ್ಷ ತೊರೆಯಲಿದ್ದಾರೆ ಎಂದು ಚೆಲುವರಾಯಸ್ವಾಮಿ ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್​ನ ಒಂದಿಬ್ಬರು ಕಾಂಗ್ರೆಸ್​ಗೆ ಬರ್ತಾರೆ ಅನ್ನೊ ಬಗ್ಗೆ ನಾನೂ ಕೇಳಿದ್ದೀನಿ. ಆದ್ರೆ ನನ್ನ ಜೊತೆ ಯಾರೂ ಮಾತನಾಡಿಲ್ಲ. ಚುನಾವಣೆ ಸಮಯದಲ್ಲಿ ಮುಖಂಡರು ಪಕ್ಷ ಬದಲಾವಣೆ ಮಾಡೋದು ಸಾಮಾನ್ಯ. ಅದು ಮುಂದಿನ ಚುನಾವಣೆಯಲ್ಲೂ ನಡೆಯಲಿದೆ. ಬಿಜೆಪಿಯಿಂದಲೂ ಕಾಂಗ್ರೆಸ್​ಗೆ ಪಕ್ಷಾಂತರ ಆಗುವ ಸಾಧ್ಯತೆ ಇದೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಚೆಲುವರಾಯಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net