ತುಳು ಪರಂಪರೆಯನ್ನು ನಾಡಿಗೆ ನೀಡಿದವರು : ಮೂಡುಬಿದಿರೆ ಭಟ್ಟಾರಕ ಶ್ರೀ ಸ್ಮರಣೆ

New Project (26)
Published on

ಮೂಡುಬಿದಿರೆ: ಮಂದಾರ ಕೇಶವ ಭಟ್ಟರು ನಮ್ಮ ತುಳು ಪರಂಪರೆ ಸೊಗಡನ್ನು ಈ ನಾಡಿಗೆ ನೀಡಿ, ಕಾವ್ಯದ ಮುಖಾಂತರ ಜೀವಂತವಾಗಿದ್ದಾರೆ. ಕಾವ್ಯಯಾನದ ಮೂಲಕ ಅವರ ಕಾವ್ಯ ಸಂಗೀತದೊಡನೆ ಸೇರಿ ಕಲಾ ರಸಿಕರಿಗೆ ವಿಶೇಷ ಅನುಭೂತಿ ನೀಡುತ್ತದೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ನುಡಿದರು.

ಮೂಡುಬಿದಿರೆ ಜೈನಮಠದಲ್ಲಿ ತುಳುವ ಮಹಾಸಭೆ ಮೂಡುಬಿದಿರೆ, ಧವಳತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ಮಂದಾರ ಪ್ರತಿಷ್ಠಾನ ಮಂಗಳೂರು, ತುಳು ಕೂಟ ಬೆದ್ರ ಸಹಯೋಗದಲ್ಲಿ ಭಾನುವಾರ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರು ಬರೆದ ಬೀರದ ಬೊಲ್ಬು-ಶ್ರೀಕೃಷ್ಣನ ಬಾಲಲೀಲೆ ಕಾವ್ಯಯಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅರ್ಥಗಾರಿಕೆ, ಪ್ರಶಾಂತ ರೈ ಪುತ್ತೂರು ಹಾಗೂ ರಚನಾ ಚಿತ್ಕಲ್ ಗಾಯನ ಮತ್ತು ಎಂ.ದೇವಾನಂದ ಭಟ್ ಮದ್ದಳೆಯೊಂದಿಗೆ ಸತತ ಮೂರು ಗಂಟೆ ಕಾವ್ಯಯಾನ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಶಾರದಾಮಣಿ, ಸಂಗೀತ ನಿರ್ದೇಶಕ, ತುಳು ವರ್ಲ್ಡ್‌ನ ಮುಖ್ಯಸ್ಥ ಡಾ.ರಾಜೇಶ್ ಆಳ್ವ, ತುಳುವ ಮಹಾಸಭೆಯ ಕಾರ್ಯನಿರ್ವಹಣಾಧಿಕಾರಿ ಪ್ರಮೋದ್ ಸಪ್ರೆ, ಡಾ.ಮಂದಾರ ರಾಜೇಶ್ ಭಟ್, ಜಯಂತಿ ಬಂಗೇರ, ಚಂದ್ರಹಾಸ ದೇವಾಡಿಗ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಸುದೇಶ್ ಕುಮಾರ್ ಪಟ್ಣಶೆಟ್ಟಿ, ಮಂದಾರ ರಾಜೇಶ್ ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net