ಚಂದ್ರಮೌಳೀಶ್ವರ ದೇವಾಲಯ ಪ್ರತಿಷ್ಠಾನದ ಮಂಡಲ ಪೂಜೆ

ಚಂದ್ರಮೌಳೀಶ್ವರ ದೇವಾಲಯ ಪ್ರತಿಷ್ಠಾನದ ಮಂಡಲ ಪೂಜೆ
Published on

ಅರಸೀಕೆರೆ ಗ್ರಾಮಾಂತರ: ಹಾರನಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ದೇವಾಲಯ ಪ್ರತಿಷ್ಠಾನದ ಮಂಡಲ ಪೂಜೆ ಅಂಗವಾಗಿ ಶತವಾರ ರುದ್ರಾಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ವೈಭವದಿಂದ ಜರುಗಿದವು.

ಶ್ರೀ ಪ್ರಸನ್ನ ಶಕ್ತಿ ಗಣಪತಿ, ಶ್ರೀ ಪಾರ್ವತಿ ದೇವಿ ಅಮ್ಮನವರಿಗೆ ವಿಶೇಷ ಪೂಜೆ ಅಲಂಕಾರ ಸೇವೆಗಳು ನಡೆಯಿತು. ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಮಂಗಳ ದ್ರವ್ಯಗಳಿಂದ ವಿಶೇಷ ಅಭಿಷೇಕ, ಶತವಾರ ರುದ್ರಾಭಿಷೇಕ, ಬಿಲ್ವಾರ್ಚನೆ, ವಿವಿಧ ಸೇವೆಗಳು ನಡೆಯಿತು.

ಸುಹಾಸಿನಿಯರಿಂದ ಸೌಂದರ್ಯ ಲಹರಿ ವಿಶೇಷ ಪಾರಾಯಣ, ಭಜನೆ ನಡೆಯಿತು. ಹಾಸನದ ವೇದ ವಿದ್ವಾನ್ ಎಂ.ವಿ. ಕೃಷ್ಣಮೂರ್ತಿ ಘನಪಾಠಿಗಳ ಆಚಾರ್ಯತ್ವದಲ್ಲಿ ಗಣಪತಿ ಪೂಜೆ, ರುದ್ರ ಹೋಮ, ಮಹಾಪೂರ್ಣಾಹುತಿ ನಡೆಯಿತು. ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿ ಸೇವೆ ಭಕ್ತರ ಸಮ್ಮುಖದಲ್ಲಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net