ಮಂಚನಾಯಕನಹಳ್ಳಿ ಗ್ರಾಪಂ ಕಚೇರಿ ಕಳವು

FotoJet
Published on

ಬಿಡದಿ : ಇಲ್ಲಿನ ಹನುಮಂತನಗರದ ಬಳಿಯ ಮಂಚನಾಯಕನಹಳ್ಳಿ ಗ್ರಾಪಂ ಕಚೇರಿಯ ಕಿಟಿಕಿ ಮುರಿದು ಒಳ ನುಗ್ಗಿರುವ ಕಳ್ಳರು ಕಚೇರಿಯಲ್ಲಿನ ಮೊಬೈಲ್ ಹಾಗೂ ಕೆಲ ದಾಖಲೆಗಳನ್ನು ಕದ್ದಿದ್ದಾರೆ.

ರಾಜ್ಯದಲ್ಲಿಯೇ ಹೆಚ್ಚು ಕರ ವಸೂಲಿ ಮಾಡುವ ಹೆಗ್ಗಳಿಕೆಯನ್ನು ಮಂಚನಾಯಕನಹಳ್ಳಿ ಗ್ರಾಪಂ ಹೊಂದಿದ್ದು, ಬುಧವಾರ ರಾತ್ರಿ ಕಚೇರಿಯ ಹಿಂಭಾಗದ ಕಿಟಕಿ ಮುರಿದು ಒಳ ನುಗ್ಗಿರುವ ಕಳ್ಳರು ಕಚೇರಿ ಕೊಠಡಿಗಳಲ್ಲಿನ ಡ್ರಾಯರ್ ಜಾಲಾಡಿದ್ದಾರೆ. ಬೀರುಗಳನ್ನು ಒಡೆದು ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿಮಾಡಿದ್ದಾರೆ. ಎರಡು ಅಂತಸ್ತಿನ ಈ ಕಟ್ಟಡದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕೊಠಡಿ ಒಂದನ್ನು ಬಿಟ್ಟು ಬೇರೆಲ್ಲೆಡೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ಒಂದು ಮೊಬೈಲ್ ಹಾಗೂ ಕೆಲ ದಾಖಲೆ ಮತ್ತು ಸಿಕ್ಕ ಸ್ವಲ್ಪ ಹಣ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸೆರೆಯಾದ ದೃಶ್ಯ

ಗ್ರಾಪಂನಲ್ಲಿ ಸಿಸಿಟಿವಿ ಕ್ಯಾಮರಾಗಳಿವೆ. ಅವುಗಳಲ್ಲಿ 3-4 ಸಿಸಿಟಿವಿಗಳಿಗೆ ಅಳವಡಿಕೆ ಮಾಡಿದ್ದ ಡಿವಿಆರ್‌ಗಳು ಎರಡು ದಿನಗಳ ಹಿಂದೆ ಶಾರ್ಟ್ ಸರ್ಕ್ಯೂಟ್ ಆಗಿ ಸುಟ್ಟಿವೆ. ಉಳಿದ ಕ್ಯಾಮರಾಗಳಲ್ಲಿ ಯಾವ ಡಿವಿಆರ್‌ನಲ್ಲೂ ಕಳ್ಳರ ಚಲನವಲನ ಸೆರೆಯಾಗಿಲ್ಲ. ಗ್ರಾಪಂನ ಯಾವ ಕ್ಯಾಮರಾ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮೊದಲೇ ತಿಳಿದು, ಕೃತ್ಯ ವ್ಯಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net