ಮಾನಸಿ ಸುಧೀರ್‌ಗೆ ‘ಅಭಿನಯ ಶಂಕರಿ’ ಬಿರುದು ಪ್ರದಾನ

manasi sudhir
ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ನಟಿ ಮಾನಸಿ ಸುಧೀರ್ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಮತ್ತಿತರರಿದ್ದರು.
Published on

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ನಟಿ ಮಾನಸಿ ಸುಧೀರ್ ಅವರಿಗೆ ‘ಅಭಿನಯ ಶಂಕರಿ’ ಬಿರುದು ನೀಡಿ ಗೌರವಿಸಲಾಯಿತು.

ಎಕ್ಸಲೆಂಟ್ ಪ್ರತಿಭಾವಂತ ಗುರುಗಳನ್ನು ಹೊಂದಿದೆ. ಅವರ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕು. ಸಂಸ್ಥೆ ನೀಡುವ ಅತ್ಯುತ್ತಮ ಪ್ರೋತ್ಸಾಹವನ್ನು ಉತ್ತಮವಾಗಿ ಬಳಸಿಕೊಂಡು ಕಲಾವಿದರಾಗಬೇಕು ಎಂದು ಮಾನಸಿ ಸುಧೀರ್ ಹೇಳಿದರು.

ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ, ಕಲೆ ಮನುಷ್ಯನನ್ನು ಸಂತೋಷವಾಗಿಡುತ್ತದೆ. ಕಲೆಯ ಮೂಲಕ ಸಂತೋಷವನ್ನು ಉಣಬಡಿಸುತ್ತಿರುವ ನಟಿ ಮಾನಸಿ ಸುಧೀರ್ ಅವರಿಗೆ ‘ಅಭಿನಯ ಶಂಕರಿ’ ಎಂಬ ಬಿರುದು ನೀಡಿ ಗೌರವಿಸುವುದು ನಮಗೆ ಹೆಮ್ಮೆಯೆನಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಪ್ರಪಂಚದ ಮೂಲೆ ಮೂಲೆಗಳಲ್ಲಿ ಸಾಧನೆ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದರು.

ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಕಲಾ ಚಟುವಟಿಕೆಗಳನ್ನು ಪ್ರೀತಿಯಿಂದ ಆಶ್ವಾದಿಸಿ ವಿದ್ಯಾರ್ಥಿಗಳನ್ನು ಕಲೆಯಲ್ಲಿ ಮಾಸ್ಟರ್ಸ್‌ ಮಾಡುವುದು ನಮ್ಮ ಕನಸಾಗಿದೆ ಎಂದರು.

ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ನಿರ್ದೇಶಕ ಡಾ.ಸಂಪತ್ ಕುಮಾರ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಸಹ ಮುಖ್ಯ ಶಿಕ್ಷಕ ಜಯಶೀಲ, ಸೆಂಟ್ರಲ್ ಶಾಲೆಯ ಉಪ ಪ್ರಾಂಶುಪಾಲೆ ವಿಮಲಾ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಮೌಲ್ಯ ಸ್ವಾಗತಿಸಿದರು. ಶ್ಯಾಮಿಲಿ ಹೆಗ್ಡೆ ವಂದಿಸಿದರು. ವಿದ್ಯಾರ್ಥಿ ಸಂಜಿತ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net