ಮಾನಸ ಸರೋವರ ಚಿತ್ರದ ಛಾಯಾಗ್ರಾಹಕನಿಗೆ ಸಂದ ರಾಜ್ಯೋತ್ಸವ ಪ್ರಶಸ್ತಿ !

BSB
Published on

ತುಮಕೂರು: ಜಿಲ್ಲೆಯ ತಿಪಟೂರಿನ‌ ಬಿ.ಎಸ್.ಬಸವರಾಜು ಚಲನಚಿತ್ರ ಕ್ಷೇತ್ರದಲ್ಲಿ ಛಾಯಾಗ್ರಾಹಕರಾಗಿದ್ದು ಅವರಿಗೆ ಈ ಬಾರಿಯ ರಾಜ್ಯರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದಿ.ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಾನಸ ಸರೋವರ, ಅಮೃತಘಳಿಗೆ ಸೇರಿದಂತೆ 80 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಛಾಯಾಗ್ರಹಣ ನೀಡಿರುವ ಬಸವರಾಜು 40 ವರ್ಷಗಳ ಕಾಲ ಚಿತ್ರರಂಗದಲ್ಲಿ ತಂತ್ರಜ್ಞರಾಗಿ ತೆರೆಮರೆಯಲ್ಲಿ ದುಡಿದಿದ್ದಾರೆ.

ಕೆ.ಭಾಗ್ಯರಾಜ್ ನಿರ್ದೇಶನದಲ್ಲು ತಮಿಳುಚಿತ್ರಗಳಲ್ಲಿ ತಮ್ಮ ಕೈಚಳಕ ತೋರಿಸಿರುವ ಬಸವರಾಜು ಅತ್ಯತ್ತಮ ಛಾಯಗ್ರಾಹಕ ಪ್ರಶಸ್ತಿಗೆ ಅಮೃತಘಳಿಗೆ ಚಿತ್ರಕ್ಕೆ ರಾಜ್ಯಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದರು. ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಕ್ರೀಡಾಕ್ಷೇತ್ರದಿಂದ ಗುಬ್ಬಿ ತಾಲೂಕಿನ ಕಲ್ಲೂರಿನ ಎಚ್.ಬಿ.ನಂಜೇಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net